ಈ ವರ್ಷದ ಕೊನೆಯ ಪ್ರಧಾನಿ ಮೋದಿ ಮನ್ ಕೀ ಬಾತ್
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ನ 84ನೇ ಆವೃತ್ತಿ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 2021ನೇ ಕೊನೇಯ ಎಪಿಸೋಡ್ ಇದಾಗಿದ್ದು, ಮತ್ತೆ ಮುಂದಿನ ಮನ್ ಕೀ ಬಾತ್ ಬರುವ ವರ್ಷವೇ ಇರಲಿದೆ. ಸಾಮಾನ್ಯವಾಗಿ ಪ್ರತಿ ಬಾರಿಯೂ ಮನ್ ಕೀ ಬಾತ್ ಪೂರ್ವದಲ್ಲಿ ಪ್ರಧಾನಿ ಮೋದಿ, ಯಾವ ವಿಷಯದ ಬಗ್ಗೆ ಮಾತನಾಡಲಿ ಎಂದು ಜನರ ಬಳಿ ಸಲಹೆ ಕೇಳುತ್ತಾರೆ. ಜನರೂ ಕೂಡ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಅವರ ಬಳಿ ಹೇಳಿಕೊಳ್ಳಬಹುದಾಗಿದೆ. ಹಾಗೇ, ಈ ಬಾರಿ ಕೂಡ ಅವರಿಗೆ ಜನರಿಂದ ಅನೇಕ ರೀತಿಯ ಸಲಹೆಗಳು ಬಂದಿವೆ ಎಂದು ಅವರೇ ತಿಳಿಸಿದ್ದಾರೆ.
ತಿಂಗಳ ಪ್ರಾರಂಭದಲ್ಲಿಯೇ ಮನ್ ಕೀ ಬಾತ್ ಬಗ್ಗೆ ಟ್ವೀಟ್ ಮಾಡಿದ್ದ ಅವರು, 2021ರ ಕೊನೇ ಮನ್ ಕೀ ಬಾತ್ನ್ನು ಡಿ.26ರಂದು ನಡೆಸಲಿದ್ದೇನೆ. ವರ್ಷದ ಕೊನೇ ಮನ್ ಕೀ ಬಾತ್ಗೆ ಸಂಬಂಧಪಟ್ಟಂತೆ ಈಗಾಗಲೇ ಹಲವು ಸಲಹೆಗಳನ್ನು ಜನರು ನನಗೆ ನೀಡುತ್ತಿದ್ದಾರೆ. ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವವರು, ತಳಮಟ್ಟದಲ್ಲಿ ಬದಲಾವಣೆ ತರಲು ಪ್ರಯತ್ನ ಮಾಡುತ್ತಿರುವವರ ಜೀವನದ ಬಗ್ಗೆ ಮನ್ ಕೀ ಬಾತ್ನಲ್ಲಿ ಮಾತನಾಡಿ ಎಂದು ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದರು.