Crime

ಜಮ್ಮು-ಕಾಶ್ಮೀರದಲ್ಲಿ 3 ಕಡೆ ಎನ್‌ಕೌಂಟರ್‌; 5 ಉಗ್ರರ ಹತ್ಯೆ

ಶ್ರೀನಗರ: ಶನಿವಾರ ಮುಂಜಾನೆಯಿಂದ ತಡ ರಾತ್ರಿವರೆಗೆ ನಡೆದ ಉಗ್ರರ ಎನ್‌ಕೌಂಟರ್‌ಗಳಲ್ಲಿ ಭಾರತೀಯ ಯೋಧರು ಐವರು ಉಗ್ರರರನ್ನು ಹೊಡೆದುರುಳಿಸಿದ್ದಾರೆ. ಇದರಲ್ಲಿ ಅಲ್‌ಖೈದಾಗೆ ಸೇರಿದ ಒಬ್ಬ ಐಇಡಿ ಸ್ಪೆಷಲಿಸ್ಟ್‌ ಕೂಡಾ ಸೇರಿದ್ದಾನೆ.

ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಶುರುವಾದ ಗುಂಡಿನ ಕಾಳಗ ತಡರಾತ್ರಿ ಮುಗಿದಿದೆ. ದಕ್ಷಿಣ ಕಾಶ್ಮೀರದ ಮೂರು ಪ್ರಾಂತ್ಯಗಳಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ ಐವರು ಉಗ್ರರು ಸಾವನ್ನಪ್ಪಿದ್ದಾರೆ.

ಮೊದಲ ಎನ್‌ಕೌಂಟರ್‌ ಶೋಫಿಯಾನ್‌ ಜಿಲ್ಲೆಯ ಚೌಗಮ್‌ ನಲ್ಲಿ ನಡೆದಿದ್ದು, ಇಬ್ಬರು ಉಗ್ರರು ಹತರಾಗಿದ್ದಾರೆ. ಎರಡನೇ ಎನ್‌ಕೌಂಟರ್‌ ಪುಲ್ವಾಮಾದ ಹರ್ದುಮಿರ್‌ ಎಂಬಲ್ಲಿ ನಡೆದಿದ್ದು, ಇದರಲ್ಲೂ ಇಬ್ಬರು ಉಗ್ರರು ಹತರಾಗಿದ್ದಾರೆ. ಮೂರನೇ ಎನ್‌ಕೌಂಟರ್‌ ಅನಂತ್‌ನಾಗ್‌ ಜಿಲ್ಲೆಯ ಖುಷ್‌ರಾಯ್‌ ಖಲನ್‌ ಎಂಬಲ್ಲಿ ನಡೆದಿದ್ದು, ಅಖ್‌ಖೈದಾ ಬಾಂಬ್‌ ಎಕ್ಸ್‌ಪರ್ಟ್‌ ಹತನಾಗಿದ್ದಾನೆ.

Share Post