Health

ದೇಶದಲ್ಲಿ ಒಮಿಕ್ರಾನ್‌ ಕೇಸ್‌ಗಳ ಸಂಖ್ಯೆ 459ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದುವರೆಗೆ ದೇಶದಲ್ಲಿ ಒಮಿಕ್ರಾನ್‌ಗೆ ತುತ್ತಾಗಿರುವವರ ಸಂಖ್ಯೆ 459ಕ್ಕೆ ಏರಿದೆ. ಸುಮಾರು ಹದಿನೇಳು ರಾಜ್ಯಗಳಲ್ಲಿ ಒಮಿಕ್ರಾನ್‌ ಸೋಂಕು ಹರಡಿದ್ದು, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ದೆಹಲಿ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಒಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ 12 ರಾಜ್ಯಗಳಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್‌ ಹಾಗೂ ಹರ್ಯಾಣ ರಾಜ್ಯಗಳಲ್ಲಿ ನೈಟ್‌ ಕರ್ಫ್ಯೂ ಜಾರಿ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್‌ ವೇಗವಾಗಿ ಹರಡುತ್ತಿರುವುದರಿಂದ 144 ಸೆಕ್ಷನ್‌ ಜಾರಿ ಮಾಡಲಾಗಿದೆ.

 

ಯಾವ ರಾಜ್ಯದಲ್ಲಿ ಎಷ್ಟು ಒಮಿಕ್ರಾನ್‌ ಕೇಸ್‌..?

1. ಮಹಾರಾಷ್ಟ್ರ – 110

2. ದೆಹಲಿ   – 79

3. ಗುಜರಾತ್‌ – 49

4. ರಾಜಸ್ಥಾನ್‌ – 43

5. ತೆಲಂಗಾಣ – 41

6. ಕರ್ನಾಟಕ – 38

7. ಕೇರಳ – 38

8. ತಮಿಳುನಾಡು – 34

9. ಆಂಧ್ರಪ್ರದೇಶ – 06

10. ಒರಿಸ್ಸಾ – 04

11. ಪಶ್ಚಿಮ ಬಂಗಾಳ – 04

12. ಹರ್ಯಾಣ, ಜಮ್ಮು, ಉತ್ತರ ಪ್ರದೇಶ – ತಲಾ 03

13. ಉತ್ತರಾಖಂಡ್‌, ಘತ್ತಿಸ್‌ಗಢ, ಲಡಕ್‌ – ತಲಾ 01

Share Post