EconomyNational

ಪಡಿತರ ಅಂಗಡಿಗಳಲ್ಲೇ ಸಿಗುತ್ತೆ ಟೊಮ್ಯಾಟೋ; ಕೆಜಿಗೆ 60 ರೂಪಾಯಿ ಮಾತ್ರ!

ಚೆನ್ನೈ; ಟೊಮ್ಯಾಟೋ ಬೆಲೆ ನೂರು ರೂಪಾಯಿ ದಾಟಿದೆ. ಇದರಿಂದಾಗಿ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ತಮಿಳುನಾಡು ಸರ್ಕಾರ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟದಂತೆ ತಡೆಯುವ ಪ್ರಯತ್ನ ಮಾಡಿದೆ. ಟೊಮ್ಯಾಟೋವನ್ನು ಪಡಿತರ ಅಂಗಡಿಯಲ್ಲಿ ಕೆಜಿಗೆ 60 ರೂಪಾಯಿ ಬೆಲೆಯಲ್ಲಿ ನೀಡಲು ನಿರ್ಧಾರ ಕೈಗೊಂಡಿದೆ.

ತಮಿಳುನಾಡಿನಲ್ಲಿ ಟೊಮ್ಯಾಟೋ ಒಂದು ಕೆಜಿಗೆ 120-140 ರೂಪಾಯಿಗೆ ಮಾರಾಟವಾಗ್ತಿದೆ. ಇದರಿಂದ ಬಡ ಜನರು ಅಗತ್ಯವಸ್ತುಗಳನ್ನು ಕೊಳ್ಳೋದಕ್ಕೆ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಬಡ ಜನರ ಪರ ನಿಂತಿದೆ.  ಪಡಿತರ ಅಂಗಡಿಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮಳಿಗೆಗಳ ಮೂಲಕ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟ ಮಾಡಲು ತಮಿಳುನಾಡು ಸರ್ಕಾರ ಶುರು ಮಾಡಿದೆ. ಕೆಜಿಗೆ ಅರವತ್ತು ರೂಪಾಯಿ ಬೆಲೆಯಲ್ಲಿ ಟೊಮ್ಯಾಟೋ ನೀಡಲಾಗುತ್ತಿದೆ.

ತಮಿಳುನಾಡು ಸಹಕಾರಿ ಸಚಿವ ಎಸ್. ಪೆರಿಯಕರುಪ್ಪನ್ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ, ಈ ಸಬ್ಸಿಡಿ ಬೆಲೆಯಲ್ಲಿ ಟೊಮ್ಯಾಟೋವನ್ನು ಜನರಿಗೆ ಕೊಡಲು ತೀರ್ಮಾನಿಸಿದ್ದು, ಜನರಿಗೆ ಇದರಿಂದ ಸಂತೋಷವಾಗಿದೆ.

Share Post