CrimeNational

ತಾಯಿಗೆ ಪ್ರಿಯಕರ, ಅಪ್ರಾಪ್ತ ಮಗಳಿಗೆ ಗಂಡ; ಪಾಪಿ ತಾಯಿ

ಮುಂಬೈ; ತಾಯಿಯ ಲವರ್ ಮಗಳಿಗೆ ಗಂಡನಾಗಿ ಕಾಟ ಕೊಡುತ್ತಿರುವ ಘಟನೆ ನಡೆದಿದೆ. ಪುಣೆಯಲ್ಲಿ ವ್ಯಕ್ತಿಯೊಬ್ಬನ ಜೊತೆ ಮಹಿಳೆ ಸಂಬಂಧವಿಟ್ಟುಕೊಂಡಿದ್ದು ಅದೇ ವ್ಯಕ್ತಿ ಜೊತೆ ಮಗಳಿಗೆ ಮದುವೆ ಮಾಡಿಸಿದ್ದಾಳೆ.

ಮಗಳಿಗೆ ಬಲವಂತ ಮಾಡಿ ಮದುವೆ ಮಾಡಿಸಿದ್ದು, ಆತನೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಒತ್ತಾಯಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದೆ.

ಅಪ್ರಾಪ್ತ ಮಗಳ ಮೇಲೆ ದೌರ್ಜನ್ಯ ಎಸಗಲು ತಾಯಿಯೇ ಕುಮ್ಮಕ್ಕು ನೀಡಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಬಾಲಕಿ ತನ್ನ ನೋವನ್ನು ಸಹಪಾಠಿಯೊಬ್ಬರಿಗೆ ತಿಳಿಸಿದಾಗ ಈ ಬಗ್ಗೆ ಮಹಿಳಾ ಸಾಮಾಜಿಕ ಕಾರ್ಯಕರ್ತೆಯೊಬ್ಬರಿಗೆ ಮಾಹಿತಿ ನೀಡಲಾಯಿತು ನಂತರ ಘಟನೆ ಬೆಳಕಿಗೆ ಬಂದಿದೆ. ಪ್ರಿಯಕರ ಮಹಿಳೆಯ ದೂರದ ಸಂಬಂಧಿಯಾಗಿದ್ದು, ಆಕೆಯೊಂದಿಗೆ ವಾಸವಾಗಿದ್ದನು.

Share Post