ಯುದ್ಧದ ವೇಳೆ ಯೋಧರ ಮೃತದೇಹ ತರಲು ಆಗಲ್ಲ, ಹೀಗಿರುವಾಗ ನವೀನ್ ಮೃತದೇಹ ಬರುತ್ತೆಂದು ನಿರೀಕ್ಷಿಸಿರಲಿಲ್ಲ-ಸುಧಾಕರ್
ಬೆಂಗಳೂರು: ಯುದ್ಧದ ವೇಳೆ ಯೋಧರ ಮೃತದೇಹ ತರಲು ಆಗಲ್ಲ, ಹೀಗಿರುವಾಗ ನವೀನ್ ಮೃತದೇಹ ಬರುತ್ತೆಂದು ನಿರೀಕ್ಷಿಸಿರಲಿಲ್ಲ ಎಂದು ಸುಧಾಕರ್ ಬೆಂಗಳೂರಿನಲ್ಲಿ ವೈದ್ಯಕೀಯ ಸಚಿವ ಸುಧಾಕರ್ ಹೇಳಿದ್ದಾರೆ. ಶೆಲ್ ದಾಳಿಯಲ್ಲಿ ನವೀನ್ ತಲೆಗೆ ಕಾಂಕ್ರೀಟ್ ಬ್ಲಾಕ್ ಹೊಡೆದಿದೆ. ಕಾಂಕ್ರೀಟ್ ಬ್ಲಾಕ್ ಹೊಡೆದಿದ್ದರಿಂದ ನವೀನ್ ಮೃತಪಟ್ಟಿದ್ದಾರೆ ಎಂದು ವಿಧಾನ ಪರಿಷತ್‌ಗೆ ನವೀನ್ ಸಾವಿನ ಬಗ್ಗೆ ಸುಧಾಕರ್ ಮಾಹಿತಿ ನೀಡಿದ್ದಾರೆ.
ಎಲ್ಲಾದರೂ ಸರಿ ಯುದ್ಧದ ಸಂದರ್ಭದಲ್ಲಿ ಯೋಧರ ಮೃತದೇಹ ತರಲು ಆಗಲ್ಲ, ಹೀಗಿರುವಾಗ ನವೀನ್ ಮೃತದೇಹ ಭಾರತಕ್ಕೆ ಬರುತ್ತೆಂದು ನಿರೀಕ್ಷೆ ಕೂಡ ಮಾಡಿರಲಿಲ್ಲ. ಈ ವಿಷಯದಲ್ಲಿ ಪ್ರಧಾನಿ ಮೋದಿ, ಸಿಎಂ ಕಾಳಜಿ ಬದ್ಧತೆಯಿಂದ ಮೃತದೇಹ ಬಂದಿದೆ. ಹೀಗಾಗಿ ಪ್ರಧಾನಿ ನರೇಮದ್ರ ಮೋದಿ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಶೋಕದಲ್ಲೂ ನವೀನ್ ಪೋಷಕರು ದೇಹದಾನ ಮಾಡಲು ನಿರ್ಧರಿಸಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ದೇಹದಾನ ಮಾಡ್ತಿದಾರೆ ಅವರಿಗೆ ನನ್ನ ಧನ್ಯವಾದಗಳು ಎಂದು ಆರೋಗ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ರು.