Districts

ರೂಬೆಲ್ಲಾ ಚುಚ್ಚುಮದ್ದಿಗೆ ಬಲಿಯಾದರಾ ಮೂವರು ಮಕ್ಕಳು..?

ಬೆಳಗಾವಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೂಬೆಲ್ಲಾ ಚುಚ್ಚುಮದ್ದು ಪಡೆದಿದ್ದ ಮಕ್ಕಳಲ್ಲಿ ನಾಲ್ವರು ಅಸ್ವಸ್ಥರಾಗಿದ್ದು, ಅದ್ರಲ್ಲಿ ಮೂವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಲ್ಲಿ ನಡೆದಿದೆ.

     ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 17 ಮಕ್ಕಳಿಗೆ ರೂಬೆಲ್ಲಾ ಚುಚ್ಚುಮದ್ದು ನೀಡಲಾಗಿತ್ತು. ಇದ್ರಲ್ಲಿ ನಾಲ್ಕು ಮಕ್ಕಳಿಗೆ ರಿಯಾಕ್ಷನ್‌ ಆಗಿ, ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದರು. ಅದ್ರಲ್ಲಿ ಬೋಚಬಾಳ ಗ್ರಾಮದ ಪವಿತ್ರಾ (೧೩ ತಿಂಗಳು) ಮಧು (೧೪ ತಿಂಗಳು) ಹಾಗೂ ಮಲ್ಲಾಪುರದ ಚೇತನಾ (೧೫ ತಿಂಗಳು) ಮೃತಪಟ್ಟಿದ್ದಾರೆ. ಮತ್ತೊಂದು ಮಗು ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದೆ.

Share Post