National

ದೆಹಲಿ ಪಾರ್ಕಿಂಗ್‌ನಲ್ಲಿ ಬೆಂಕಿ ಅವಘಡ; 90 ವಾಹನಗಳಿಗೆ ಹಾನಿ

ನವದೆಹಲಿ; ಆಗ್ನೇಯ ದೆಹಲಿಯ ಜಾಮಿಯಾ ನಗರದ ಎಲೆಕ್ಟ್ರಿಕ್‌ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 90 ವಾಹನಗಳಿಗೆ ಹಾನಿಯಾಗಿವೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಜಾಮಿಯ ನಗರದ ಟಿಕೋನಾ ಪಾರ್ಕ್‌ನಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. 11 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ಹತೋಟಿಗೆ ತರಲಾಗಿದೆ.

Share Post