CrimeNational

ಪ್ರವಾದಿಯ ಗೌರವಕ್ಕೆ ಚ್ಯುತಿ ತಂದರೆ ಆತ್ಮಾಹುತಿ ದಾಳಿ; ಅಲ್‌ ಖೈದಾ ಬೆದರಿಕೆ

ನವದೆಹಲಿ; ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‍ನಲ್ಲಿ ಪ್ರವಾದಿಯ ಗೌರವಕ್ಕಾಗಿ ಹೋರಾಡಲು ಆತ್ಮಾಹುತಿ ದಾಳಿಗಳನ್ನು ನಡೆಸುವುದಾಗಿ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಬೆದರಿಕೆ ಪತ್ರ ರವಾನಿಸಿದೆ.

ಕೆಲವು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಅಲ್‌ ಖೈದಾ ಈ ಬೆದರಿಕೆ ಹಾಕಿದೆ. ಪತ್ರದಲ್ಲಿ ಪ್ರವಾದಿಯನ್ನು ಅವಮಾನಿಸುವವರನ್ನು ಕೊಲ್ಲುತ್ತೇವೆ. ಅದಕ್ಕಾಗಿ ನಮ್ಮ ಮಕ್ಕಳನ್ನು ಆಹುತಿ ನೀಡಲು ಸಿದ್ಧವಾಗಿದ್ದೇವೆ. ಈಗ ಮುಂಬೈ, ಉತ್ತರಪ್ರದೇಶ, ಗುಜರಾತ್, ದೆಹಲಿಯಲ್ಲಿರುವ ಕೇಸರಿ ಭಯೋತ್ಪಾದಕರು ತಮ್ಮ ಅಂತ್ಯಕ್ಕಾಗಿ ಕಾಯಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

Share Post