ಪೊನ್ನಂಬಲಮೇಡುನಲ್ಲಿಅಯ್ಯಪ್ಪನ ಭಕ್ತರಿಗೆ ಮಕರ ಜ್ಯೋತಿ ದರ್ಶನ
ಶಬರಿಮಲೆ: ಪೊನ್ನಂಬಲಮೇಡುನಲ್ಲಿ ಅಯ್ಯಪ್ಪನ ರೂಪದಲ್ಲಿ ಭಕ್ತರಿಗೆ ʻಮಕರ ಜ್ಯೋತಿʼ ದರ್ಶನವಾಗಿದೆ. ಮಕರ ಸಂಕ್ರಮಣದ ದಿನ ಸಂಜೆ ಆಕಾಶದಲ್ಲಿ ನಕ್ಷತ್ರ ಉದಯ ಆಗುತ್ತಿದ್ದಂತೆ ಸಂಜೆ 6.30ರಿಂದ 6.45ರ ವೇಳೆಗೆ ಪೊನ್ನಂಬಲಮೇಡುನಲ್ಲಿ ದೀಪಾರಾಧನೆ ವೇಳೆ ಜ್ಯೋತಿ ರೂಪದಲ್ಲಿ ಭಕ್ತರಿಗೆ ದರ್ಶನವಾಗಿದೆ. ಮಕರ ಜ್ಯೋತಿ ದರ್ಶನ ಪಡೆದು ಶರಣಂ ಅಯ್ಯಪ್ಪ ಎಂಬ ಸ್ತುತಿಯೊಂದಿಗೆ ಅಯ್ಯಪ್ಪ ಭಕ್ತರು ಪುನೀತರಾದರು.
ಸನ್ನಿಧಾನಂ, ಪಂಪಾ ಸೇರಿದಂತೆ ಪೊನ್ನಂಬಲಮೇಡು ಕಾಣಸಿಗುವ ಸ್ಥಳಗಳಲ್ಲಿ ಅಯ್ಯಪ್ಪ ಭಕ್ತರು ಜ್ಯೋತಿ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾದು ಕುಳಿತಿದ್ದರು. ಮಕರಸಂಕ್ರಮಣದ ಮುನ್ನಾದಿನದಂದು ಅಯ್ಯಪ್ಪನಿಗೆ ತೊಡುವ ತಿರುವಾಭರಣಗಳೊಂದಿಗೆ ಪಂದಳಂನಿಂದ ಮೆರವಣಿಗೆಯು ಸಂಜೆ 5 ಗಂಟೆಗೆ ಶರಂಕುತ್ತಿ ತಲುಪಿತು. ಅಲ್ಲಿಂದ ದೇವಸ್ವಂ ಬೋರ್ಡ್ ನಿಯೋಗವು ಮೆರವಣಿಗೆಯನ್ನು ಬರಮಾಡಿಕೊಂಡು ವಾದ್ಯಮೇಳದೊಂದಿಗೆ ಸನ್ನಿಧಾನಕ್ಕೆ ಕೊಂಡೊಯ್ದಿತು.
ಸ್ವೀಕರಿಸಿದ ತಿರುವಾಭರಣಗಳನ್ನು ಅಯ್ಯಪ್ಪನ ಮೂರ್ತಿಗೆ ತೊಡಿಸಿ ತಂತ್ರಿ ಮತ್ತು ಮೇಲ್ಶಾಂತಿ ಪೂಜೆಸಲ್ಲಿಸಿದರು. ಬಳಿಕ ಪೊನ್ನಂಬಲಮೇಡುಬೆಟ್ಟದಲ್ಲಿ ಮಕರವಿಳಕ್ಕು ಕಾಣಿಸಿತು . ಮಧ್ಯಾಹ್ನ 2.29ಕ್ಕೆ ಮಕರ ಸಂಕ್ರಮಣದ ವೇಳೆ ಕವಡಿಯಾರ್ ಅರಮನೆಯಿಂದ ತುಪ್ಪದಿಂದ ಅಯ್ಯಪ್ಪನಿಗೆ ಅಭಿಷೇಕ ಮಾಡಲಾಯಿತು. ಮಕರ ಸಂಕ್ರಮಣ ಪೂಜೆಯ ನಂತರ ಮುಚ್ಚಿದ್ದ ಮೆಟ್ಟಿಲುಗಳನ್ನು ಸಂಜೆ 5 ಗಂಟೆಗೆ ತೆರೆಯಲಾಯಿತು.
When the Makara Jyothi appears in the sky, it is eternal bliss for the devotees of Lord Ayyappa.
LIVE NOW –#Sabarimala #Makaravilakku on https://t.co/G7VbbnRozy pic.twitter.com/GOPkX0FKvZ
— Doordarshan National दूरदर्शन नेशनल (@DDNational) January 14, 2022