National

ಮಹಾಭಾರತದ ʻಭೀಮʼ ಇನ್ನಿಲ್ಲ; ಹೃದಯಾಘಾತದಿಂದ ಪ್ರವೀಣ್‌ ಕುಮಾರ್‌ ಸಾವು

ನವದೆಹಲಿ: ಕೆಲ ದಶಕಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿಯಲ್ಲಿ ಭೀಮನ ಪಾತ್ರದಲ್ಲಿ ನಟಿಸಿದ್ದ ಪ್ರವೀಣ್‌ ಕುಮಾರ್‌ ಸೋಬ್ತಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿದ್ದು, ಸೋಮವಾರ ಸಂಜೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪ್ರವೀಣ್‌ ಕುಮಾರ್‌ ಸೋಬ್ತಿ ಅವರು ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ನವದೆಹಲಿಯ ಅಶೋಕ್ ವಿಹಾರ್ ನಲ್ಲಿ ಪ್ರವೀಣ್‌ ನೆಲೆಸಿದ್ದರು. ಹಲವು ವರ್ಷಗಳಿಂದ ಅವರು ಎದೆನೋವಿನಿಂದ ಬಳಲುತ್ತಿದ್ದರು. ಸೋಮವಾರ ರಾತ್ರಿ ಕೂಡಾ ಪ್ರವೀಣ್‌ ಕುಮಾರ್‌ ಸೋಬ್ತಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ವೈದ್ಯರು ಮನೆಗೇ ಬಂದು ಚಿಕಿತ್ಸೆ ನೀಡಿದ್ದರು. ಆದ್ರೆ ರಾತ್ರಿ ಹತ್ತು ಗಂಟೆ ವೇಳೆಗೆ ಪ್ರವೀಣ್‌ ಅವರು ನಿಧನರಾಗಿದ್ದಾರೆ.

ಹ್ಯಾಮರ್ ಮತ್ತು ಡಿಸ್ಕಸ್ ಥ್ರೋನಲ್ಲಿ ವಿವಿಧ ಅಥ್ಲೆಟಿಕ್ ಈವೆಂಟ್‌ಗಳಲ್ಲಿ ಪ್ರವೀಣ್‌ ಅವರು ಭಾರತವನ್ನು ಪ್ರತಿನಿಧಿಸಿದ್ದರು. 1966 ಮತ್ತು 1970ರಲ್ಲಿ ಎರಡು ಚಿನ್ನದ ಪದಕಗಳನ್ನು ಒಳಗೊಂಡಂತೆ ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದಿದ್ದರು. ಅವರು 1966ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅವರು ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕವನ್ನು ಭಾರತಕ್ಕೆ ತಂದು ಕೊಟ್ಟಿದ್ದರು.

Share Post