National

ಶಂಕಿತ ಭಯೋತ್ಪಾದಕರಿಂದ ಶ್ರೀನಗರದಲ್ಲಿ ಗ್ರೆನೇಡ್‌ ದಾಳಿ: 9ನಾಗರೀಕರಿಗೆ ಗಾಯ

ಶ್ರೀನಗರ:  ಶಂಕಿತ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರೆನೇಡ್ ಸ್ಫೋಟದಿಂದ ದಾರಿಹೋಕರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.  ಭಯೋತ್ಪಾದಕರು ಅರೆಸೈನಿಕ ಎಸ್‌ಎಸ್‌ಬಿ ಪಡೆಗಳ ಬಂಕರ್ ವಾಹನದ ಕಡೆಗೆ ಗ್ರೆನೇಡ್ ಎಸೆದಿದ್ದಾರೆ.  ವಾಹನಕ್ಕೆ ತಾಗಿದ ಗ್ರೆನೇಡ್‌ ನಗರದ ಮಧ್ಯಭಾಗದಲ್ಲಿರುವ ಹರಿ ಸಿಂಗ್ ಹೈ ಸ್ಟ್ರೀಟ್‌ನಲ್ಲಿ ರಸ್ತೆಬದಿಯಲ್ಲಿ ಬಿದ್ದು ಸ್ಫೋಟ ಗೊಂಡಿದೆ.  ವ್ಯಾಪಾರ-ವ್ಯವಹಾರ ಸದಾ ಜನರಿಂದ  ಈ ಪ್ರದೇಶ ಗಿಜಿಗುಡುತ್ತಿರುತ್ತದೆ ಎನ್ನಲಾಗಿದೆ.

ಎಸ್‌ಎಸ್‌ಬಿ ಗ್ರೆನೇಡ್‌ಗೆ ಗುರಿಯಾಗಿದೆ ಆದರೆ ಭದ್ರತಾ ಪಡೆಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಉಪ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಕಿಶೋರ್ ಪ್ರಸಾದ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

“ನಾವು ಒಂಬತ್ತು ಜನರಿಗೆ ಸ್ಪ್ಲಿಂಟರ್ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು (ಏಳು ಪುರುಷರು ಮತ್ತು ಇಬ್ಬರು ಮಹಿಳೆಯರು),” SMHS ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕನ್ವರ್ಜಿತ್ ಸಿಂಗ್ ಮಾಹಿತಿ ನೀಡಿದ್ರು.  ಭಯಪಡುವಂತಹ  ಗಾಯಗಳೇನಾಗಿಲ್ಲ ಆದರೆ ನಾವು ಎಲ್ಲಾ ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ಪರೀಕ್ಷೆ ಮಾಡಿದ ಬಳಿಕವೇ ಅವರನ್ನು ಮನೆಗೆ ಕಳಿಸಲಾಗುತ್ತದೆ ಎಂದಿದ್ದಾರೆ. ಆದರೆ ಘಟನೆ ಬಗ್ಗೆ ಪೊಲೀಸರು ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

 

Share Post