International

ನ್ಯೂಯಾರ್ಕ್‌ನಲ್ಲಿ ಗಾಂಧಿ ಪ್ರತಿಮೆ ಧ್ವಂಸ; ಅನಿವಾಸಿ ಭಾರತೀಯರು ಆಕ್ರೋಶ

ವಾಷಿಂಗ್ಟನ್: ನ್ಯೂಯಾರ್ಕ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಈ ಕೃತ್ಯವನ್ನು ಖಂಡಿಸಿದ್ದಾರೆ. ಈ ಹಿಂದೆ ಕೂಡಾ ಅಮೆರಿಕದಲ್ಲಿ ಇಂತಹ ಕೃತ್ಯ ನಡೆದಿತ್ತು. ಇದೀಗ ಮತ್ತೆ ದುಷ್ಕರ್ಮಿಗಳು ಗಾಂಧಿ ಪ್ರತಿಮೆಗೆ ಹಾನಿ ಮಾಡಿದ್ದಾರೆ ಎಂದು ಅನಿವಾಸಿ ಭಾರತೀಯ ಮುಖಂಡರು ಆರೋಪಿಸಿದ್ದಾರೆ.

    ಇಲ್ಲಿನ ಮ್ಯಾನ್‌ಹಟನ್‌ ಯೂನಿಯನ್ ಸ್ಕ್ವೇರ್‌ನಲ್ಲಿ 8 ಅಡಿ ಎತ್ತರದ ಮಹಾತ್ಮ ಗಾಂಧಿ ಸ್ಥಾಪಿಸಲಾಗಿತ್ತು. ಕಂಚಿನ ಪ್ರತಿಮೆ ಇದಾಗಿದ್ದು, ದುಷ್ಕರ್ಮಿಗಳು ಇದನ್ನು ವಿರೂಪಗೊಳಿಸಿದ್ದಾರೆ. ಇದರ ವಿರುದ್ಧ ಅನಿವಾಸಿ ಭಾರತೀಯರು ಸಿಡಿದೆದ್ದಿದ್ದಾರೆ. ಈ ಕೃತ್ಯದ ಬಗ್ಗೆ ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಲಾಗಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಚೇರಿ ತಿಳಿಸಿದೆ.

Share Post