National

ಲೈವ್‌ನಲ್ಲಿ ಪ್ಯಾನಲಿಸ್ಟ್‌ ನೃತ್ಯ:ವಿಡಿಯೋ ವೈರಲ್

ಕೊಲ್ಕತ್ತಾ: ವೈರಲ್‌ ಆಗುವ ವಿಡಿಯೋಗಳು ಕೆಲವೊಮ್ಮೆ ಚಿತ್ರ ವಿಚಿತ್ರವಾಗಿರುತ್ತವೆ. ಆ ವಿಡಿಯೋಗಳಲ್ಲಿ ಕೆಲವಂತೂ ಹೊಟ್ಟೆ ಉಣ್ಣಾಗಿಸುವಷ್ಟು ನಗು ಬರುವ ವಿಡಿಯೋಗಳು ವೈರಲ್‌ ಆಗಿವೆ. ಇನ್ನೂ ಕೆಲವರು ಬಾವೋದ್ವೇಗಕ್ಕೆ ಒಳಗಾಗಿ ತಾವು ಏನು ಮಾಡ್ತಿದ್ದೇವೆಂಬ ಪರಿಜ್ಞಾನ ಇಲ್ಲದೆ ನಡೆದುಕೊಳ್ಳುತ್ತಾರೆ. ಇಲ್ಲೂ ಕೂಡ ಹಾಗೆ ಆಗಿದೆ. ಖಾಸಗಿ ಸುದ್ದಿ ವಾಹಿನಿಯೊಂದು ನೇರ ಚರ್ಚೆಯೊಂದನ್ನು ಪ್ರಸಾರ ಮಾಡಲಾಗುತ್ತಿತ್ತು. ಚರ್ಚೆಗೆ ಸಂಬಂಧಪಟ್ಟ ಅತಿಥಿಗಳನ್ನು ಆಹ್ವಾನ ಮಾಡಲಾಗಿತ್ತು. ಚರ್ಚಾ ಸಮಯದಲ್ಲಿ ತಮಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಲೈವ್‌ನಲ್ಲಿ ಎದ್ದು ವಿಚಿತ್ರವಾಗಿ ಆಡಿದ್ದಾರೆ.

ಇದು ಒಂದು ವರ್ದ ಹಿಂದಿನ ಹಳೆ ವಿಡಿಯೋ ಎಂದು ಹೇಳಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್‌ ವೈರಲ್‌ ಆಗಿ ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ಬ್ಯಾನ್‌ ಮಾಡುವ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ಓರ್ವ ಪ್ಯಾನಲಿಸ್ಟ್‌ ಈ ರೀತಿ ವರ್ತಿಸಿದ್ದಾರೆ. ಅದು ಇತ್ತ ನೃತ್ಯವೂ ಅಲ್ಲ, ನನಗೆ ಮಾತನಾಡಲು ಸಮಯ ನೀಡಿ..ಎಂಬಂತೆ ವಿಚಿತ್ರ ರೀತಿಯಲ್ಲಿ ವರ್ತಿಸಿದ್ದಾರೆ.

Share Post