Districts

ನಾಯಿಗಳ ದಾಳಿಗೆ 4 ವರ್ಷದ ಹೆಣ್ಣು ಮಗು ಬಲಿ

ಬೆಳಗಾವಿ: ಇಲ್ಲಿನ ಅಥಣಿ ತಾಲ್ಲೂಕಿನಲ್ಲಿ ದಾರುಣ ಘಟನೆಯೊಂದು ನಡೆಹೋಗಿದೆ. ಬಳವಾಡ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯೊಬ್ಬಳು ನಾಯಿ ದಾಳಿಗೆ ತುತ್ತಾಗಿದ್ದು, ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾಳೆ.

ನಾಲ್ಕು ವರ್ಷ ಪುಟ್ಟ ಬಾಲಕಿ ಸೌಜನ್ಯಾ ಮಲ್ಲಪ್ಪ ಮೃತ ಬಾಲಕಿ. ಈಕೆ ಮನೆಯ ಬಳಿ ಆಟವಾಡುತ್ತಿದ್ದಾಗ ನಾಯಿಗಳ ಹಿಂಡು ಆಕೆ ಮೇಲೆ ದಾಳಿ ನಡೆಸಿ ಮಾರಾಣಾಂತಿಕವಾಗಿ ಗಾಯಗೊಳಿಸಿದ್ದವು. ಕೂಡಲೇ ಅಲ್ಲಿದ್ದವರು ಮಗುವನ್ನು ನಾಯಿಗಳಿಂದ ಬಿಡಿಸಿದರು. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುವ ವೇಳೆಗೆ ಬಾಲಕಿಯ ಪ್ರಾಣ ಪಕ್ಷಿ ಹಾರಿಹೋಗಿದೆ ಎಂದು ತಿಳಿದುಬಂದಿದೆ.

 

Share Post