National

ಭಾರತ-ಬಾಂಗ್ಲಾ ಸ್ಮಂಗ್ಲಿಂಗ್‌ ನಿಯಂತ್ರಣಕ್ಕೆ ಮಹಿಳಾ ಪೇದೆಗಳು ರೆಡಿ

ಪ.ಬಂಗಾಳ: ಹೆಣ್ಣು ಮಕ್ಕಳ ಸಾಹಸ ಮೆಚ್ಚಲೇಬೇಕಾಗಿದೆ. ಪ್ರತಿಯೊಂದು ರಂಗದಲ್ಲೂ ಪುರುಷರಿಗಿಂತ ನಾವೇನು ಕಮ್ಮಯಿಲ್ಲ ಎಂತ ಕೆಲಸ ಮಾಡ್ತಿದಾರೆ. ಪುರಸಭೆ ಕಾರ್ಮಿಕರಿಂದ ಹಿಡಿದು ಸೇನಾಧಿಕಾರಿವರೆಗೂ ಎಲ್ಲಾ ವಲಯಗಳಲ್ಲೂ ಮಹಿಳಾ ಮಣಿಗಳಿದ್ದಾರೆ. ಪೊಲೀಸ್‌ ಮತ್ತು ಸೇನೆ ಹೆಣ್ಣುಮಕ್ಕಳಿಗೆ ಕಷ್ಟದ ಕೆಲಸ ಎನ್ನುವವರ ಬಾಯಿ ಮುಚ್ಚಿಸಲು ದಿನದಿಂದ ದಿನಕ್ಕೆ ಕಾರ್ಯಪ್ರವೃತ್ತರಾಗುತ್ತಿದ್ದಾರೆ ನಮ್ಮ ಹೆಣ್ಣು ಹುಲಿಗಳು.

ಭಾರತ-ಬಾಂಗ್ಲಾ ಗಡಿಯಲ್ಲಿ ಹೆಚ್ಚಾಗುತ್ತಿರುವ ಸ್ಮಗ್ಲಿಂಗ್‌ ತಡೆಯಲು ಕಾವಲಾಗಿ ನಿಂತಿದ್ದಾರೆ ಮಹಿಳಾ ಪೇದೆಗಳು. ಅರ್ಧರಾತ್ರಿಯಾದ್ರೂ ಸರಿಯೇ, ಬೆಳಗಾದ್ರೂ ಸರಿಯೇ ಯಾವ ಸಮಯದಲ್ಲಾದ್ರೂ ನಾವು ಕಾರ್ಯಪ್ರವೃತ್ತರಾಗಲು ರೆಡಿ ಎಂದು ಗಡಿ ಕಾಯುತ್ತಿದ್ದಾರೆ ನಮ್ಮ ಮಹಿಳಾ ಕಾನ್ಸ್‌ಟೇಬಲ್ಸ್.‌ ಪಶ್ಚಿಮ ಬಂಗಾಳದ ಹರಿದಾಸಪುರ ಮತ್ತು ಜಯಂತಿಪುರ ಸರಿಹದ್ದಿನಲ್ಲಿ ಸುಮಾರು ಮೂವತ್ತಾರು ಮಂದಿ ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ಭದ್ರತಾ ದಳ ನಿಯೋಜಿಸಿದೆ. ಅರ್ಧರಾತ್ರಿಯಾದರೂ ಕಣ್ಣಿಗೆ ಎಣ್ಣೆ ಹಾಕಿಕೊಂಡು ಗಸ್ತು ತಿರುಗುತ್ತಿದ್ದಾರೆ. ಕೆಲವು ಕಿಲೋಮೀಟರ್‌ ದೂರದಲ್ಲೇ ಬಾಂಗ್ಲಾದೇಶ ಗಡಿಯಿದ್ದು,

ಭಾರತ-ಬಾಂಗ್ಲಾ ನಡುವೆ ತಂತಿ ಬೇಲಿ ಕೂಡ ಇಲ್ಲದಿರುವುದರಿಂದ ಹತ್ತಿರದಲ್ಲಿರುವ ಕೆಲವು ಗ್ರಾಮಸ್ಥರು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅದನ್ನು ಹತ್ತಿಕ್ಕಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅತ್ತ ಪಂಜಾಬ್‌ನ ಗುರುದಾಸನಪುರ ಜಿಲ್ಲೆಯ 138ಕಿಲೋಮೀಟರ್‌ ಸರಿಹದ್ದಿನಲ್ಲಿಯೂ ಸಹ ಮಹಿಳಾ ಸೇನೆ ಬೆಂಗಾವಲಾಗಿ ನಿಂತಿದ್ದಾರೆ.

Share Post