CinemaNational

ಶ್ವಾಸಕೋಶ ಸೋಂಕು; ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್‌ ಸಾವು

ಚೆನ್ನೈ; ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಶ್ವಾಸಕೋಶ ಸೋಂಕಿನಿಂದಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಿದ್ಯಾಸಾಗರ್‌ ಅವರು ಕೆಲ ತಿಂಗಳ ಹಿಂದೆ ಕೊವಿಡ್‌ ಸೋಂಕಿಗೆ ತುತ್ತಾಗಿದ್ದರು. ಇದೇ ವೇಳೆ ಅವರಿಗೆ ಶ್ವಾಸಕೋಶ ಸಂಬಂಧಿತ ಸೋಂಕು ಹೆಚ್ಚಾಗಿತ್ತು. ಇತ್ತೀಚೆಗೆ ತೀವ್ರಗೊಂಡಾಗ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಅವರು ಸಾವನ್ನಪ್ಪಿದ್ದಾರೆ.

ವಿದ್ಯಾಸಾಗರ್ ನಿಧನಕ್ಕೆ ಹಿರಿಯ ನಟ ಶರತ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೀನಾ ಪತಿ ವಿದ್ಯಾಸಾಗರ್ ಅವರ ಅಕಾಲಿಕ ನಿಧನ ಸುದ್ದಿ ತಿಳಿದು ಆತಂಕವಾಯಿತು. ಮೀನಾ ಅವರಿಗೆ ನಮ್ಮ ಕುಟುಂಬದಿಂದ ಸಂತಾಪಗಳು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ನಟ ಶರತ್ ಟ್ವೀಟ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಅಭಿನಯಿಸಿರುವ ಮೀನಾ ಅವರು 2009ರಲ್ಲಿ ಉದ್ಯಮಿ ವಿದ್ಯಾಸಾಗರ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ 11 ವರ್ಷದ ಮಗಳು ನೈನಿಕಾ ಇದ್ದಾಳೆ.

Share Post