BengaluruCrime

ವಿದೇಶಿಗನಿಗೆ ಕಿರುಕುಳ ನೀಡಿದ್ದ ವ್ಯಕ್ತಿ ಅರೆಸ್ಟ್‌ ಮಾಡಿದ ಪೊಲೀಸರು

ಬೆಂಗಳೂರು; ನೆದರ್‌ಲ್ಯಾಂಡ್‌ನಿಂದ ಭಾರತ ಪ್ರವಾಸ ಕೈಗೊಂಡಿದ್ದ ಪ್ರವಾಸಿಗನಿಗೆ ಕಿರುಕುಳ ನೀಡಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ನವಾಬ್ ಹಯಾತ್ ಶರೀಫ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾರೆ. ನೆದರ್‌ಲ್ಯಾಂಡ್‌ ಮೂಲದ ಮ್ಯಾಡ್ಲಿ ರೋವರ್ ಎಂಬುವವರು ಚಿಕ್ಕಪೇಟೆಯಲ್ಲಿ ವಿಡಿಯೋ ಮಾಡುತ್ತಿದ್ದರು. ಸಂಡೇ ಬಜಾರ್‌ನಲ್ಲಿ ಅವರು ವಿಡಿಯೋ ಮಾಡುತ್ತಿದ್ದಾಗ ಆರೋಪಿ, ಹಲ್ಲೆ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಜನರು ಪೊಲೀಸರಿಗೆ ಟ್ಯಾಗ್‌ ಮಾಡಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯ ಮಾಡಿದ್ದರು. ವಿದೇಶಿ ಪ್ರವಾಸಗರ ಮೇಲೆ ಈ ರೀತಿಯ ದೌರ್ಜನ್ಯ ಸರಿಯಲ್ಲ ಎಂದೂ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Share Post