National

ಇಂದು ಕ್ರಿಸ್‌ ಮಸ್‌ ಸಂಭ್ರಮ, ಪ್ರಧಾನಿ ನರೇಂದ್ರ ಮೋದಿ ಶುಭಾಶಯ

ನವದೆಹಲಿ: ಇಂದು ರಾಜ್ಯಾದ್ಯಂತ ಕ್ರಿಸ್‌ ಮಸ್‌ ಸಂಭ್ರಮ. ಎಲ್ಲೆಡೆ ಬೆಳಗ್ಗೆಯಿಂದಲೇ ಚರ್ಚ್‌ ನಲ್ಲಿ ಯೇಸುಗೆ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ವಿಶ್ವದ ಎಲ್ಲರಿಗೂ ಕ್ರಿಸ್‌ಮಸ್‌ ಶುಭಾಶಯ ಕೋರಿದ್ದಾರೆ. ಯೇಸು ಕ್ರಿಸ್ತರ ಉದಾತ್ತ ಸಂದೇಶಗಳನ್ನು ಸ್ಮರಿಸೋಣ ಎಂದು ಮೋದಿ ಅವರು ಸಂದೇಶ ನೀಡಿದ್ದಾರೆ.
ಸೇವೆ, ದಯೆ, ನಮ್ರತೆಯನ್ನು ಯೇಸು ಕ್ರಿಸ್ತರ ಸಂದೇಶಗಳು ಪ್ರತಿಪಾದಿಸಿವೆ. ಎಲ್ಲರೂ ಆರೋಗ್ಯ, ಸಾಮರಸ್ಯದಿಂದ ಇರಿ ಎಂದು ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಶುಭಾಶಯ ಕೋರಿದ್ದಾರೆ.

Share Post