JAMMU KASHMIR: ಹತ್ತು ಮಂದಿ ಸ್ಲೀಪರ್ ಸೆಲ್ಸ್ ಅರೆಸ್ಟ್
ಶ್ರೀನಗರ: ಕಾಶ್ಮೀರದಲ್ಲಿ ಸ್ಟೇಟ್ ಇನ್ವೆಸ್ಟಿಗೇಷನ್ ಏಜೆನ್ಸಿ (State Investigation Agency) ಹತ್ತು ಮಂದಿ ಸ್ಲೀಪರ್ ಸೆಲ್ಸ್ ಅರೆಸ್ಟ್ ಮಾಡಿದೆ. ಇವರೆಲ್ಲರೂ ಉಗ್ರವಾದ ಸಂಸ್ಥೆ ಜೈಷ್ ಎ ಮೊಹಮ್ಮದ್ ಗೆ ಸೇರಿದವರು ಎಂದು ರಾಜ್ಯ ತನಿಖಾ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಬಂಧಿತರೆಲ್ಲರೂ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಓವರ್ ಗ್ರೌಂಡ್ ವರ್ಕರ್ಸ್ ಆಗಿ ಕೆಲಸ ಮಾಡುತ್ತಿದ್ದರೆಂದು ಗೊತ್ತಾಗಿದೆ. ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ರಾತ್ರಿ ವೇಳೆ ನಡೆಸಿದ ದಾಳಿಗಳಲ್ಲಿ ಈ ಸ್ಲೀಪರ್ ಸೆಲ್‌ಗಳು ಸಿಕ್ಕಿದ್ದಾರೆ. ಆದ್ರೆ ಬಂಧಿತ ಹತ್ತು ಮಂದಿಯಲ್ಲಿ ಒಬ್ಬರಿಗೊಬ್ಬರು ಸಂಬಂಧವಿಲ್ಲ ಎಂದು ತಿಳಿದುಬಂದಿದೆ.
ಜೈಷ್ ಎ ಉಗ್ರ ಸಂಘಟನೆಯ ಟೆರರಿಸ್ಟ್ ಕಮಾಂಡರ್‌ಗಳಿಂದ ಬರುವ ಸೂಚನೆಗಳಂತೆ ಸ್ಲೀಪರ್ ಸೆಲ್‌ಗಳು ಕೆಲಸ ಮಾಡುತ್ತಾರೆ. ಸ್ಲೀಪರ್ ಸೆಲ್ಸ್ ಯುವಕರನ್ನು ನೇಮಿಸಿಕೊಳ್ಳುವುದು, ಆರ್ಥಿಕ ವ್ಯವಸ್ಥೆಗಳನ್ನು ನಿರ್ವಹಿಸುವುದರ ಜೊತೆಗೆ ಕಶ್ಮೀರದಲ್ಲಿನ ಹಲವು ಪ್ರಾಂತ್ಯಗಳಿಗೆ ಆಯುಧಗಳನ್ನು ಸರಬರಾಜು ಮಾಡುತ್ತಿದ್ದರೆಂದು ಗೊತ್ತಾಗಿದೆ.
ದಾಳಿ ವೇಳೆ ಸ್ಪೀಪರ್ ಸೆಲ್ಸ್‌ನಿಂದ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಳು, ಬ್ಯಾಂಕಿಂಗ್ ರೆಡಕಾರ್ಡ್‌ಗಳು, ಡಮ್ಮಿ ಪಿಸ್ತೂಲ್‌ಗಳು ಮುಂತಾದುವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳನ್ನು ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. 2020 ಏಪ್ರಿಲ್‌ನಲ್ಲಿ ಹತ್ಯೆಯಾದ ನಾಲ್ವರು ಉಗ್ರರಿಗೆ ಸಂಬಂಧಿಸಿದ ಒಬ್ಬ ವ್ಯಕ್ತಿ ಬಂಧಿತ ಸ್ಲೀಪರ್ ಸೆಲ್ಸ್‌ನಲ್ಲಿ ಇದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ರೀತಿಯಲ್ಲಿ ಕಾಶ್ಮೀರದಲ್ಲಿ ಹೊಸದಾಗಿ ಸ್ಟೇಟ್ ಇನ್ವೆಸ್ಟಿಗೇಷನ್ ಏಜೆನ್ಸಿ ರೂಪಿಸಲಾಗಿದೆ. 2022 ಫೆಬ್ರವರಿ 16 ರ ಬುಧವಾರ ಕಾಶ್ಮೀರ ಕಣಿವೆಯಲ್ಲಿ ಹಲವು ದಾಳಿಗಳನ್ನು ನಡೆಸಿದೆ. ಈ ದಾಳಿಗಳು ಜೈಷ್ ಎ ಮೊಹಮ್ಮದ್ ಮೇಲೆ ಕೇಂದ್ರೀಕರಿಸಿ ಮಾಡಲಾಗಿದೆ.
ಬಂಧಿತರು ಶಾಲೆ, ಕಾಲೇಜುಗಳಿಗೆ ಹೋಗುವವರ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರ ಮನಃಪರಿವರ್ತನೆ ಮಾಡಿ ಉಗ್ರ ಚಟುವಟಿಕೆಗೆ ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದರು.