CrimeNational

ರೈಲು ಬೋಗಿ ಕೊಂಡೊಯ್ಯುತ್ತಿದ್ದ ಲಾರಿ ಅಪಘಾತ; ರಸ್ತೆ ಅಡ್ಡಕ್ಕೆ ಬಿದ್ದ ಬೋಗಿ!

ಬಿಹಾರ; ಬಿಹಾರದಲ್ಲಿ ರೈಲು ಬೋಗಿ ಕೊಂಡೊಯ್ಯುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿದೆ. ಇದರಿಂದಾಗಿ ರೈಲು ಬೋಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಬಿಹಾರದ ಭಗಲ್​ಪುರದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. 

ಲೊಹಿಯಾ ಬ್ರಿಡ್ಜ್ ಬಳಿ ರೈಲು ನಿಲ್ದಾಣ ಇದೆ. ಅಲ್ಲಿಯೇ ಸಮೀಪ ರೆಸ್ಟೋರೆಂಟ್‌ ತೆರೆಲಾಗುತ್ತಿತ್ತು. ಅದಕ್ಕೆ ರೈಲು ಬೋಗಿಯನ್ನು ಬಳಸಲಾಗುತ್ತಿತ್ತಿ. ಅದಕ್ಕಾಗಿಯೇ ಲಾರಿಯಲ್ಲಿ ರೈಲು ಬೋಗಿಯನ್ನು ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ.

 

Share Post