ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿ ಜಾರಿಬಿದ್ದ ಮಹಿಳೆ- ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು.
ಮಹಾರಾಷ್ಟ್ರ: ರೈಲಿನಲ್ಲಿ ಪ್ರತಿದಿನ ಸಾವಿರಾರು ಜನ ಸಂಚರಿಸುತ್ತಾರೆ. ಹಾಗೆಯೆ ಅರಿವಿಲ್ಲದಂತೆ ಹೆಚ್ಚಿನ ಅಪಘಾತಗಳು ಕೂಡ ಉಂಟಾಗುತ್ವೆ. ತಡವಾಗಿ ಆಗಮಿಸಿಯೋ ಅಥವಾ ಇಳಿಯಲು ಬಾರದೆ ಕೆಳಗೆ ಬೀಳುವುದೋ..ಹೀಗೆ ಅನೇಕ ಘಟನೆಗಳು ನಡೆಯುತ್ತವೆ. ಹಾಗೆಯೇ ಈ ವಿಡಿಯೋದಲ್ಲಿ ಕೂಡ ಮಹಿಳೆಯೊಬ್ಬರು ಚಲಿಸುತ್ತಿರುವ ರೈಲು ಹತ್ತಲು ಯತ್ನಿಸಿ ಅಪಘಾತಕ್ಕೀಡಾಗಿದ್ದರೆ. ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದಿದ್ದಾರೆ. ಆದರೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ಲಾಟ್‌ಫಾರ್ಮ್‌ನಲ್ಲಿ ರೈಲು ಚಲಿಸುತ್ತಿದ್ದಾಗ ಮಹಿಳೆಯೊಬ್ಬರು ರೈಲು ಹತ್ತಲು ಪ್ರಯತ್ನಿಸಿದ್ದಾರೆ, ರೈಲನ್ನು ಹತ್ತಲು ಯತ್ನಿಸಿದ ಆಕೆಯ ಕಾಲು ಜಾರಿ ಕಂಬಿ ಹಿಡಿದು ಹಾಗೆಯೇ ಮುಂದೆ ಸಾಗಿದ್ದಾರೆ. ಅಷ್ಟರಲ್ಲಿ ಮಹಾರಾಷ್ಟ್ರದ ಭದ್ರತಾ ಪಡೆಯ ಸಿಬ್ಬಂದಿ ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ಈ ದೃಶ್ಯ ಬಹಳ ಅಪಾಯಕಾರಿಯಾಗಿದೆ, ನೋಡುಗರು ಎದೆ ಝಲ್ಲೆನಿಸುತ್ತದೆ. ಸಿಬ್ಬಂದಿ ಸರಿಯಾದ ಸಮಯಕ್ಕೆ ಬಾರದೆ ಇದ್ದಿದ್ದರೆ ಆಕೆ ಪ್ರಾಣ ಕಳೆದುಕೊಳ್ಳುತ್ತಿದ್ದು ಗ್ಯಾರೆಂಟಿ.
चलती ट्रेन पकड़ने की कोशिश में महिला का पांव फिसल गया. #MaharashtraSurakshaForce के जवान ने मुस्तैदी से उन्हें बचाया.
जवान की जितनी प्रशंसा की जाए कम है.रहिमन चलती ट्रेन पर, चढ़ने से बचा जाए.
अनहोनी होने पर, परिवार आजीवन पछताए. pic.twitter.com/6nlncHLhvh— Dipanshu Kabra (@ipskabra) February 15, 2022