National

ಭಾರತದ ಉಕ್ಕಿನ ಮನುಷ್ಯ ಖ್ಯಾತಿಯ ಇರಾನಿ ಇನ್ನಿಲ್ಲ

ನವದೆಹಲಿ; ಸ್ಟೀಲ್ ಮ್ಯಾನ್ ಆಫ್ ಇಂಡಿಯಾ ಎಂದೇ ಖ್ಯಾತಿ ಗಳಿಸಿದ್ದ ಟಾಟಾ ಸ್ಟೀಲ್ಸ್‌ ಮಾಜಿ ಅಧ್ಯಕ್ಷ ಜಮ್ಶೆಡ್‌ ಜೆ ಇರಾನಿ ಕಳೆದ ರಾತ್ರಿ ನಿಧನರಾಗಿದ್ದಾರೆ. ಇರಾನಿ ಅವರಿಗೆ 86 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಭಾರತದ ಉಕ್ಕಿನ ಮನುಷ್ಯ ಜಮ್ಶೆಡ್‌ ಜೆ ಇರಾನಿ ಅವರು ನಿಧನರಾಗಿದ್ದಾರೆ. ಈ ಸುದ್ದಿಯನ್ನು ಟಾಟಾ ಸ್ಟೀಲ್ ತೀವ್ರ ದುಃಖದೊಂದಿಗೆ ತಿಳಿಸುತ್ತಿದೆ’ ಎಂದು ಟಾಟಾ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ. ಜೆಮ್ಶೆಡ್‌ಪುರದಲ್ಲಿರುವ ಟಾಟಾ ಆಸ್ಪತ್ರೆಯಲ್ಲಿ ಅಕ್ಟೋಬರ್‌ 31ರ ರಾತ್ರಿ 10 ಗಂಟೆಗೆ ಇರಾನಿ ನಿಧರಾದರು ಎಂದು ತಿಳಿದುಬಂದಿದೆ. 43 ವರ್ಷಗಳ ಕಾಲ ಟಾಟಾ ಸ್ಟೀಲ್ಸ್‌ ಕಂಪನಿಯ ವಿವಿಧ ಜವಾಬ್ದಾರಿಗಳನ್ನು ಜಮ್ಶೆಡ್‌ ಜೆ ಇರಾನಿ ನಿಭಾಯಿಸಿದ್ದರು. 2011ರ ಜೂನ್‌ನಲ್ಲಿ ನಿವೃತ್ತರಾಗಿದ್ದರು.

Share Post