LifestyleNational

ITV ನೆಟ್‌ವರ್ಕ್‌ನಿಂದ ಮಹಿಳೆಯರಿಗಾಗಿ ಮೀಸಲಾದ ವಿನೂತನ ಮಲ್ಟಿ ಮೀಡಿಯಾ ಶೋ

ಮುಂಬೈ; ಮಹಿಳೆಯರಿಗಾಗಿ ಮೀಸಲಾದ ವಿನೂತನ ರೀತಿಯ ಮಲ್ಟಿಮೀಡಿಯಾ ಶೋ ಒಂದನ್ನು ಐಟಿವಿ ನೆಟ್‌ವರ್ಕ್‌ ಇಂದಿನಿಂದ ಪರಿಚಯಿಸುತ್ತಿದೆ. ಮೊದಲ ಸಂಚಿಕೆಯಲ್ಲಿ ಖ್ಯಾತ ಫ್ಯಾಷನ್ ವಿನ್ಯಾಸಕರಾದ ರಿನಾ ಢಾಕಾ ಮತ್ತು ಅಂಜುಲ್ ಭಂಡಾರಿ ಅವರು iTV ನೆಟ್‌ವರ್ಕ್‌ನ ಹಿರಿಯ ಕಾರ್ಯನಿರ್ವಾಹಕ ಸಂಪಾದಕಿ ಪ್ರಿಯಾ ಸಹಗಲ್ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. 

ಈ ವುಮೆನ್‌ ವಾಂಟ್‌ ಹೆಸರಿನ ಈ  ಕಾರ್ಯಕ್ರಮ ಪ್ರತಿ ಶನಿವಾರ ಸಂಜೆ 7:30 ಕ್ಕೆ ನ್ಯೂಸ್‌ಎಕ್ಸ್‌ನಲ್ಲಿ ಪ್ರಸಾರವಾಗಲಿದೆ. ಮಧ್ಯಾಹ್ನ 3:30ಕ್ಕೆ ಇಂಡಿಯಾ ನ್ಯೂಸ್‌ನಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು Dailyhunt, Zee5, MX Player, ShemarooMe, Watcho, Mzaalo, Jio TV, Tata Play ಮತ್ತು PayTm ಲೈವ್‌ಸ್ಟ್ರೀಮ್‌ಗಳು ಸೇರಿದಂತೆ ವಿವಿಧ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡಾ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಸಮಾಜಕ್ಕೆ ಮಾದರಿ ಎನಿಸಿರುವ ಮಹಿಳೆಯರ ಸಾಧನೆಗಳನ್ನು ಗುರುತಿಸುವುದು ಹಾಗೂ ಅವರ ಸಾಧನೆಯನ್ನು ಜನರಿಗೆ ಪರಿಚಯಿಸುವುದು, ಭಾರತದಲ್ಲಿ ಪ್ರವರ್ದಮಾನಕ್ಕೆ ಬರುತ್ತಿರುವ ಮಹಿಳಾ ನಾಯಕಿರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವುದು, ಅವರ ಮೇಲೆ ಪರಿಣಾಮ ಬೀರಿರುವ ಅಂಶಗಳು ಹಾಗೂ ಮಹಿಳಾ ಸಮಸ್ಯೆಗಳು ಕುರಿತು ಸಂವಾದ ನಡೆಸುವ ಕಾರ್ಯಕ್ರಮ ಇದಾಗಿದೆ.

ಮೊದಲ ಸಂಚಿಕೆಯಲ್ಲಿ, ಫ್ಯಾಶನ್ ಡಿಸೈನರ್ ರೀನಾ ಢಾಕಾ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಗ್ಲಿಂಪ್‌ಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೆಲಸ ಮಾಡುವ ತಾಯಿಯಾಗಿ ಅವರು ಕ್ಯಾನ್ಸರ್ ವಿರುದ್ಧ ಹೇಗೆ ಹೋರಾಡಿದರು ಎಂಬುದನ್ನು  ರೀನಾ ವಿವರಿಸಿದ್ದಾರೆ.  80 ರ ದಶಕದಿಂದಲೂ ಫ್ಯಾಶನ್ ಉದ್ಯಮದ ಭಾಗವಾಗಿರುವ ರೀನಾ ಢಾಕಾ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವರು ಮಾಡಿದ ಹೋರಾಟದ ಬಗ್ಗೆ ಮತ್ತು ವೃತ್ತಿಜೀವನದ ಮಹಿಳೆಯರ ಸಂಕಟಗಳು, ಯಶಸ್ಸುಗಳ ಬಗ್ಗೆ ಮಾತನಾಡಲಿದ್ದಾರೆ.

ಇನ್ನು ಅಂಜುಲ್‌ ಭಂಡಾರಿ ಅವರು ಮದುವೆಯಾಗಬೇಕಾದ ಅನಿವಾರ್ಯತೆಗಾಗಿ ಹತ್ತನೇ ತರಗತಿಯನ್ನು ತೊರೆದಿದ್ದು. ನಂತರ ಅವರ ಜೀವನದಲ್ಲಿ ಎದುರಾದ ಸವಾಲುಗಳು, ಅದನ್ನು ಮೆಟ್ಟಿನಿಂತ ಬಗೆಯ ಬಗ್ಗೆ ಮಾತನಾಡಲಿದ್ದಾರೆ.

Share Post