CrimeNational

ಅಹಮದಾಬಾದ್‌ನಲ್ಲಿ ಭೀಕರ ದುರಂತ; ಲಿಫ್ಟ್‌ ಕುಸಿದು 7 ಸಾವು

ಅಹಮದಾಬಾದ್; ಅಹಮದಾಬಾದ್‌ನಲ್ಲಿ ಭೀಕರ ದುರಂತ ಸಂಭವಿಸಿದೆ. ನಿರ್ಮಾಣ ಹಂತದ ಕಟ್ಟಡದ ಲಿಫ್ಟ್‌ ಕುಸಿದು ಏಳು ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಹಮದಾಬಾದ್‌ನ ಗುಜರಾತ್‌ ವಿವಿ ಬಳಿ ನಡೆದಿದೆ.

ಏಳನೇ ಮಹಡಿಯಿಂದ ಲಿಫ್ಟ್  ಏಕಾಏಕಿ ಕುಸಿದಿದ್ದು, ಅದು ಹೊಡೆದು ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪೈರ್-2 ಹೆಸರಿನ ಕಟ್ಟಡದ ಕಾಮಗಾರಿ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ.

Share Post