National

ITV ಮಾಧ್ಯಮ ಸಂಸ್ಥೆಯಿಂದ ಸುಸಜ್ಜಿತ, ಅತ್ಯಾಧುನಿಕ ಮಾಧ್ಯಮ ತರಬೇತಿ ಸಂಸ್ಥೆ ಪ್ರಾರಂಭ

ನವದೆಹಲಿ: ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಐಟಿವಿ ನೆಟ್‌ವರ್ಕ್ ನವದೆಹಲಿಯಲ್ಲಿ ಐಟಿವಿ ಮೀಡಿಯಾ ಇನ್‌ಸ್ಟಿಟ್ಯೂಟ್ (ಐಟಿವಿಎಂಐ) ಎಂಬ ಪತ್ರಿಕೋದ್ಯಮ ಕಾಲೇಜನನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.  ಅತ್ಯುನ್ನತ ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಅತ್ಯಾಧುನಿಕ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ITV ಮೀಡಿಯಾ ಇನ್‌ಸ್ಟಿಟ್ಯೂಟ್ (ITVMI) ಎಲ್ಲಾ ಮಾಧ್ಯಮ ಆಕಾಂಕ್ಷಿಗಳಿಗೆ ದೂರದರ್ಶನ ಮತ್ತು ಡಿಜಿಟಲ್ ಪತ್ರಿಕೋದ್ಯಮದಲ್ಲಿ ಒಂದು ವರ್ಷದ ಪೂರ್ಣಾವಧಿ ಡಿಪ್ಲೊಮಾ ಕೋರ್ಸ್‌ಗೆ ನೋಂದಾಯಿಸಿಕೊಳ್ಳಲು ಸುವರ್ಣಾವಕಾಶವನ್ನು ಒದಗಿಸುತ್ತಿದೆ. ಇದು ಮಾಧ್ಯಮದಲ್ಲಿ ಕೆಲಸ ಮಾಡಲು ಬಯಸುವ ಹೊಸ ಪತ್ರಕರ್ತರಿಗೆ ವೃತ್ತಿಪರ ಮತ್ತು ತಾಂತ್ರಿಕ ಪರಿಣತಿಯನ್ನು ನೀಡುತ್ತದೆ. ದೂರದರ್ಶನ ಮತ್ತು ಡಿಜಿಟಲ್ ಪತ್ರಿಕೋದ್ಯಮದ ವಿವಿಧ ಹಂತದ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಇದರಿಂದ ಅನುಕೂಲವಾಗುತ್ತದೆ.  ಅಂದರೆ  ಸುದ್ದಿ ಬರವಣಿಗೆ, ವರದಿಗಾರಿಕೆ, ಪಿಟಿಸಿ, ವಾಕ್-ಥ್ರೂ, ಆಂಕರ್ರಿಂಗ್, ವಾಯ್ಸ್ ಓವರ್, ವೀಡಿಯೋ-ಎಡಿಟಿಂಗ್, ಗ್ರಾಫಿಕ್ ಡಿಸೈನಿಂಗ್, ಕ್ಯಾಮೆರಾ, ಲೈಟಿಂಗ್, ನ್ಯೂಸ್ ಪ್ರೊಡಕ್ಷನ್, ಪಿಸಿಆರ್ ಮತ್ತು ಎಂಸಿಆರ್ ಕೆಲಸ, ಮೊಬೈಲ್ ಪತ್ರಿಕೋದ್ಯಮ, ಲೈವ್ ಸ್ಟ್ರೀಮಿಂಗ್ ಮತ್ತು ನ್ಯೂಸ್ ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಸುದ್ದಿ ಬರವಣಿಗೆಯಂತಹ ಡಿಜಿಟಲ್ ಮಾಧ್ಯಮದ ಬಗ್ಗೆ ಕರಾರುವಾಕ್ಕಾಗಿ ಇಲ್ಲಿ ಹೇಳಿಕೊಡಲಾಗುತ್ತದೆ.

 

ಒಂದು ವರ್ಷದ ಪೂರ್ಣಾವಧಿ ಕೋರ್ಸ್‌ ಜೊತೆಗೆ ನಾಲ್ಕು ತಿಂಗಳ ಕೋರ್ಸ್‌ ಕೂಡಾ ಪರಿಚಯಿಸಲಾಗುತ್ತಿದೆ. ಇದ್ರಲ್ಲಿ  ವರದಿ ಮಾಡುವಿಕೆ, ಆಂಕರಿಂಗ್, ವೀಡಿಯೊ-ಎಡಿಟಿಂಗ್, ಸ್ಕ್ರಿಪ್ಟ್ ಮತ್ತು ಸೃಜನಾತ್ಮಕ ಬರವಣಿಗೆ ಬಗ್ಗೆ ಹೇಳಿಕೊಡಲಾಗುತ್ತದೆ.

 

ITVMIನ ವೈಶಿಷ್ಟ್ಯಗಳು-
* ಬೋಧನೆಯ ಸಂವಾದಾತ್ಮಕ ವಿಧಾನ
* ಪ್ರಾಯೋಗಿಕ ತರಬೇತಿಗೆ ಒತ್ತು (10% ಸಿದ್ಧಾಂತ ಮತ್ತು 90% ಪ್ರಾಯೋಗಿಕ)
* ಅತ್ಯಾಧುನಿಕ ಸ್ಟುಡಿಯೋಗಳೊಂದಿಗೆ ಸುಸಜ್ಜಿತ ಮೂಲಸೌಕರ್ಯ
* ವಿದ್ಯಾರ್ಥಿ ಸ್ನೇಹಿ ಮತ್ತು ಕೇಂದ್ರೀಕೃತ ಕಲಿಕೆಯ ವಾತಾವರಣ
* ಸುಸಜ್ಜಿತ ನ್ಯೂಸ್‌ರೂಮ್, ಉನ್ನತ ಮಟ್ಟದ ಕ್ಯಾಮೆರಾಗಳು, ಎಡಿಟಿಂಗ್ ಯಂತ್ರಗಳು, ಗ್ರಾಫಿಕ್ ಯಂತ್ರಗಳು, Vizrt ಮತ್ತು Wasp-3d ನಂತಹ ಲೈವ್ ಬ್ರಾಡ್‌ಕಾಸ್ಟ್ ಗ್ರಾಫಿಕ್ಸ್, ಆನ್‌ಲೈನ್ ಎಡಿಟಿಂಗ್, ಮಾಯಾ ಸಾಫ್ಟ್‌ವೇರ್ ಮತ್ತು 3D ಅನಿಮೇಷನ್ ತರಬೇತಿ
* ಒಳಾಂಗಣ ಹಾಗೂ ಹೊರಾಂಗಣ ಚಿತ್ರೀಕರಣದ ತರಬೇತಿಗಳು

 

ಈ ಬಗ್ಗೆ ಮಾತನಾಡಿರುವ ಐಟಿವಿ ನೆಟ್‌ವರ್ಕ್‌ ಮುಖ್ಯಸ್ಥರಾಗಿರುವ ಕಾರ್ತಿಕೇಯ ಶರ್ಮಾ, ITVMI ನಲ್ಲಿನ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಪುಸ್ತಕಗಳಿಂದ ಕಲಿಸುವುದಿಲ್ಲ. ಬದಲಾಗಿ ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ನಮ್ಮದು ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಯಾಗಿದ್ದು, ಸ್ಪಷ್ಟ ಹಾಗೂ ಸಮಗ್ರತೆಯೊಂದಿಗೆ ಸುದ್ದಿಯನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ನಾವು ಹೊತ್ತಿದ್ದೇವೆ. ನಾವು ವಿದ್ಯಾರ್ಥಿಗಳಿಗೂ ಇದನ್ನೇ ಹೇಳಿಕೊಡುತ್ತೇವೆ ಎಂದು ಹೇಳಿದ್ದಾರೆ.

 

Share Post