National

ಚುನಾವಣೆಯಲ್ಲಿ ಹವಾಲಾ ಕಾಂಚಾಣ; ಗೋವಾದಲ್ಲಿ ಸಿಕ್ಕಿಬಿತ್ತು 6.2 ಕೋಟಿ ರೂ.

ಗೋವಾ; ಗೋವಾದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಅಕ್ರಮಗಳು ಒಂದೊಂದೆ ಬಯಲಿಗೆ ಬರುತ್ತಿವೆ. ಚುನಾವಣೆ ಹಿನ್ನೆಲೆಯಲ್ಲಿ ಗೋವಾದ ಮಾರ್ಗವಾದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಅನುಮಾನ ಬಂದ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಈ ವೇಳೆ ವ್ಯಕ್ತಿಯೊಬ್ಬ ಸಾಗಿಸಲು ಯತ್ನಿಸುತ್ತಿದ್ದ 6.2 ಕೋಟಿ ರೂಪಾಯಿ ಹವಾಲಾ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಹವಾಲಾ ಆಪರೇಟರ್‌ ಒಬ್ಬರು ಮಾರ್ಗೋವ್‌ನಲ್ಲಿರುವ ಅವರ ನಿವಾಸದಲ್ಲಿ ಹವಾಲಾ ಹಣ ಇಟ್ಟಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿನಡೆಸಲಾಯಿತು. ಈ ವೇಳೆ ಅಪಾರ ಪ್ರಮಾಣದ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಆರೋಪಿಯೇ ಇದು ಹವಾಲಾ ಹಣ ಎಂದು ಹೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಮನೆಯಲ್ಲಿ ಹುಡುಕಾಟ ನಡೆಸಿದಾಗ ಹಲವು ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ. ಇನ್ನು ಆರೋಪಿ ಕಾರಿನಲ್ಲಿ ಹುಡುಕಾಡಿದಾಗ ಹಣವನ್ನು ರಹಸ್ಯವಾಗಿ ಅಡಗಿಸಿಡಲಾಗುತ್ತು. ಆರೋಪಿ ಗೋವಾದಲ್ಲಿ ಹಾರ್ಡ್‌ವೇರ್ ವ್ಯಾಪಾರಿಗಳಿಗೆ ಹವಾಲಾ ವ್ಯವಹಾರ ನಡೆಸುತ್ತಾನೆ ಎಂದು ತಿಳಿದುಬಂದಿದೆ.

ಆದಾಗ್ಯೂ, ಹವಾಲಾ ಆಪರೇಟರ್ ಹೇಳಿಕೆಯಲ್ಲಿ ವಿವಿಧ ದ್ವಂದ್ವಗಳಿವೆ. ಗೋವಾದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರಲು ಈ ನಗದು ಹಣ ಹಂಚಿಕೆ ಮಾಡಲಾಗಿತ್ತು ಎಂದು ಐಟಿ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

Share Post