ಕಂಪ್ಯೂಟರ್ ಮಾರಾಟ ಕುಸಿತ ಹಿನ್ನೆಲೆ; 6 ಸಾವಿರ ಉದ್ಯೋಗಿಗಳನ್ನು ತೆಗೆಯಲು HP ನಿರ್ಧಾರ
ನವದೆಹಲಿ; ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತ ಆರಂಭವಾಗಿದ್ದು, ಇದು ಇನ್ನಷ್ಟು ಕಂಪನಿಗಳಿಗೆ ವಿಸ್ತರಿಸುತ್ತಾ ಹೋಗುತ್ತಿದೆ. ಕಂಪ್ಯೂಟರ್ ಮಾರಾಟದಲ್ಲಿ ಕುಸಿತ ಉಂಟಾಗಿರೋದ್ರಿಂದ ಎಚ್ಪಿ ಕಂಪನಿ 6,000 ನೌಕರರನ್ನು ವಜಾ ಮಾಡುವುದಾಗಿ ಹೇಳಿದೆ.
ಈ ವರ್ಷದಲ್ಲಿ ಎಚ್ಪಿ ಕಂಪನಿ ಹಲವು ಬದಲಾವಣೆಗಳನ್ನು ಕಂಡಿದೆ. ಹೀಗಿದ್ದರೂ ಕಂಪನಿಯ ಆದಾಯದಲ್ಲಿ ಕುಸಿತ ಕಂಡಿದೆ. ಮುಂದಿನ ವರ್ಷವೂ ಇದು ಮುಂದವರೆಯುವ ಸಾಧ್ಯತೆ ಇದೆ ಎಂದು ಕಂಪನಿ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ 4000 ದಿಂದ 6000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಸಂಸ್ಥೆ ನಿರ್ಧಾರ ಮಾಡಿದೆ. 2025ರ ವೇಳೆ ಕಂಪನಿಗೆ ಮತ್ತಷ್ಟು ನಷ್ಟ ಉಂಟಾಗುವ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದ್ದು, ಆಗ ಮತ್ತಷ್ಟು ಉದ್ಯೋಗಿಗಳನ್ನು ತೆಗೆಯವುದಾಗಿ ಕಂಪನಿ ಹೇಳಿಕೊಂಡಿದೆ.