ಸಂಸತ್ತಿನಲ್ಲಿ ಟೋಪಿಗೆ ಒಪ್ಪಿಗೆ ಇದೆ ಅಂದ್ಮೇಲೆ, ಕಾಲೇಜಿನಲ್ಲಿ ಹಿಜಾಬ್ ಧಾರಣೆಗೆ ಯಾಕಿಲ್ಲ..?
ದೆಹಲಿ: ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ವಿಚಾಋವಾಗಿ ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಟೋಪಿ ಹಾಕಿಕೊಂಡು ಸಂಸತ್ತಿಗೆ ಹೋಗಲು ಸಾಧ್ಯವಾದಾಗ, ಹಿಜಾಬ್ ಧರಿಸಿ ಶಾಲೆಗಳಿಗೆ ಏಕೆ ಹೋಗಬಾರದು ಎಂದು ಪ್ರಶ್ನೆ ಮಾಡಿದ್ದಾರೆ.
‘ನಾನು ಭಾರತದ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದೇನೆ. ಸುಪ್ರೀಂ ಕೋರ್ಟ್ ತೀರ್ಪುಗಳ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಟೋಪಿ ಹಾಕಿಕೊಂಡು ಸಂಸತ್ತಿಗೆ ಹೋಗಲು ಅನುಮತಿ ಇದೆ ಎಂದ ಮೇಲೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಏಕೆ ಹೋಗಬಾರದು? 2017, 2019ರಲ್ಲಿ ಬಿಜೆಪಿ ಹೇಗೆ ಗೆದ್ದಿದೆ.? ಅವರಿಗೆ 300 ಸೀಟುಗಳು ಎಲ್ಲಿಂದ ಬಂದಿವೆ..? ಎಲ್ಲಾ ಜಾತ್ಯತೀತ ಪಕ್ಷಗಳು ಈ ದಾರಿತಪ್ಪಿಸುತ್ತಿರುವ ಧೋರಣೆ ವಿರುದ್ಧ ತಿರುಗಿಬೀಳದೆ ಕಣ್ಣು ಮತ್ತು ಕಿವಿಗಳನ್ನು ಮುಚ್ಚಿಕೊಂಡು ಹೇಡಿಗಳ ಹಾಗೆ ಕೂತಿವೆ. ವಿರೋಧ ಪಕ್ಷಗಳಿಗೆ ಮತ ಹಾಕಿದವರು ಯಾರು? ಈಗ ಮಾತನಾಡಲು ಯಾಕೆ ಭಯಪಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.