CrimeNational

ನದಿ ದಾಟುವಾಗ ಡ್ರೈವರ್‌ ಹುಚ್ಚಾಟ..!; ನೀರಿನಲ್ಲಿ ಕೊಚ್ಚಿಹೋಯ್ತು ಲಾರಿ..!

ರಾಜಸ್ಥಾನ; ಹರಿಯುತ್ತಿರುವ ನದಿಯಲ್ಲಿ ಲಾರಿ ಚಾಲಕನೊಬ್ಬ ಹುಚ್ಚಾಟ ಆಡಿದ್ದಾನೆ.. ರಸ್ತೆ ಮೇಲೆ ನದಿ ನೀರು ಹರಿಯುತ್ತಿತ್ತು.. ಹೋಗುವುದು ಬೇಡ ಎಂದು ಸ್ಥಳೀಯರು ಹೇಳಿದ್ದಾರೆ.. ಅದನ್ನು ಲೆಕ್ಕಿಸದೇ ಚಾಲಕ ಲಾರಿಯನ್ನು ನೀರಿನಲ್ಲೇ ಓಡಿಸಲು ಹೋಗಿದ್ದು, ಈ ವೇಳೆ ಲಾರಿ ನೀರಿನಲ್ಲಿ ಕೊಚ್ಚಿಹೋಗಿದೆ..

ರಾಜಸ್ಥಾನದ ಟೋಂಕ್​​ ಎಂಬಲ್ಲಿ ಈ ಘಟನೆ ನಡೆದಿದ್ದು, ಲಾರಿ ಕೊಚ್ಚಿಹೋಗುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.. ಲಾರಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಂತೆ ಲಾರಿ ಚಾಲಕ ಹಾಗೂ ಕ್ಲೀನರ್‌ ನದಿಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.. ಆದ್ರೆ ಲಾರಿ ಮಾತ್ರ ನದಿ ನೀರಿನಲ್ಲಿ ಕೊಚ್ಚಿಹೋಗಿದೆ..

ಲಾರಿ ಚಾಲಕ ಹುಚ್ಚಾಟ ಆಡಲು ಹೋಗಿದ್ದಕ್ಕೆ ಈ ದುರ್ಘಟನೆ ನಡೆದಿದೆ..

 

Share Post