BengaluruPolitics

ಮತದಾರರ ಪಟ್ಟಿ ಪರಿಷ್ಕರಣ ಗುತ್ತಿಗೆ; ಸಿಎಂ ಲಘುವಾಗಿ ಮಾತನಾಡಿದ್ದಕ್ಕೆ ಡಿಕೆಶಿ ಆಕ್ರೋಶ

ಬೆಂಗಳೂರು; ಮತದಾರರ ಪಟ್ಟಿ ಪರಿಷ್ಕರಣೆ ಗುತ್ತಿಗೆಯನ್ನು ಚಿಲುಮೆ ಸಂಸ್ಥೆ ನೀಡಿರುವ ಬಗ್ಗೆ ಕಾಂಗ್ರೆಸ್ ಮಾಡಿರುವ ಆರೋಪದ ಬಗ್ಗೆ ಸಿಎಂ ಲಘುವಾಗಿ ಮಾತನಾಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವುದು ಗಂಭೀರ ಪ್ರಕರಣ. ಇದನ್ನು ಸಿಎಂ ಬೊಮ್ಮಾಯಿ ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರವಿದ್ದಾಗಲೇ ಗುತ್ತಿಗೆ ನೀಡಲಾಗಿತ್ತು ಎಂದು ಸಿಎಂ ಆರೋಪ ಮಾಡಿದ್ದಾರೆ. ನಾವೇನಾದರೂ ಚಿಲುಮೆ ಸಂಸ್ಥೆಗೆ ಗುತ್ತಿಗೆ ಕೊಟ್ಟಿದ್ದರೆ ನಮ್ಮ ವಿರುದ್ಧ ಕ್ರಮ ಆಗಲಿ, ನಮ್ಮನ್ನು ಬಂಧಿಸಲಿ ಎಂದು ಡಿಕೆಶಿ ಇದೇ ವೇಳೆ ತಿಳಿಸಿದರು. ಇನ್ನು ಚಿಲುಮೆ ಸಂಸ್ಥೆಗೂ ಹೊಂಬಾಳೆ ಸಂಸ್ಥೆಗೂ ನಂಟಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳಿರುವುದಕ್ಕೆ ಮಾನನಷ್ಟು ಮೊಕದ್ದಮೆ ಹಾಕುತ್ತೇನೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌, ಅವರ ಮಾನ ನಷ್ಟ ಆಗಿದ್ದರೆ ಕೇಸ್‌ ಹಾಕಲಿ. ಜೊತೆಗೆ ಯಾರು ಎಷ್ಟು ಬಾರಿ ಫೊನ್‌ನಲ್ಲಿ ಮಾತನಾಡಿದ್ದಾರೆ ಅನ್ನೋದು ಕೂಡಾ ಹೊರಬರಲಿ ಎಂದು ಆಗ್ರಹಿಸಿದ್ದಾರೆ.

Share Post