ನನಗೆ ನಿದ್ರೆ ಬರ್ತಿದೆ ರೈಲು ನಡೆಸಲ್ಲ ಎಂದ ಚಾಲಕ: ಪ್ರಯಾಣಿಕರು ಕಕ್ಕಾಬಿಕ್ಕಿ
ಉತ್ತರಪ್ರದೇಶ: ಮೊನ್ನೆಯಷ್ಟೇ ಪಾಕಿಸ್ತಾನದಲ್ಲಿ ವಿಮಾನ ನಡೆಸುವ ಪೈಲೆಟ್ ನನ್ನ ಕೆಲಸದ ಅವಧಿ ಮುಗಿದಿದೆ. ನಾನು ವಿಮಾನ ಚಲಾಯಿಸಲ್ಲ ಎಂದು ಹೇಳಿದ ಘಟನೆ ಮುನ್ನವೇ ಇಂದು ಭಾರತದಲ್ಲಿ ಅಂಥಧ್ದೇ ಘಟನೆ ಮನೆ ಮಾಡಿದೆ. ಆದ್ರೆ ಇಲ್ಲಿ ಹೇಳಿದ್ದು ಹಾಗೆ ಹೇಳಿದ್ದು ಪೈಲೆಟ್ ಅಲ್ಲ ಬದಲಿಗೆ ರೈಲು ಚಾಲಕ. ಹೌದು ಉತ್ತರಪ್ರದೇಶದ ಜಂಕ್ಷನ್‌ವೊಂದರಲ್ಲಿ ನನಗೆ ನಿದ್ರೆ ಬರ್ತಿದೆ, ರೈಲು ಚಲಾಯಿಸಲು ಸಾಧ್ಯವಿಲ್ಲ ಎಂದಿದ್ದಾನೆ. ಚಾಲಕ ನಿದ್ರೆಯಿಂದ ಎಚ್ಚರವಾಗುವವರೆಗೂ ಪ್ರಯಾಣಿಕರು ಗಂಟೆಗಟ್ಟಲೇ ಸ್ಟೇಷನ್‌ನಲ್ಲೇ ಕಾಯುವ ಪರಿಸ್ಥಿತಿ ಉಂಟಾಯಿತು.
ಬೆಳಗ್ಗೆ ಏಳು ಗಂಟೆ ವೇಳೆಗೆ ಬಾಲಾಮಾವೂಕು ಜಂಕ್ಷನ್‌ಗೆ ರೈಲು ತಲುಪಬೇಕಿತ್ತು. ಆದರೆ ಷಜಹಾನ್‌ಪೂರ್ ಜಂಕ್ಷನ್‌ಗೆ ಮೂರು ಗಂಟೆ ತಡವಾಗಿ ಬಂದಿದೆ. ಮುಂದಿನ ಏಳು ಗಂಟೆಗಳ ಪ್ರಯಾಣಕ್ಕೆ ಚಾಲಕ ನಿರಾಕರಿಸಿದ್ದಾನೆ. ರಾತ್ರಿಯಿಂದ ನನಗೆ ಸರಿಯಾಗಿ ನಿದೆಯಲ್ಲಿ ನಾನು ನಿದ್ರೆ ಮಾಡಬೇಕು ಎಂದು ಖಡಾಖಂಡಿತವಾಗಿ ಜವಾಬು ನೀಡಿದ್ದಾನೆ. ವಿಚಾರ ತಿಳಿಸಿ ಜಂಕ್ಷನ್‌ಲ್ಲಿಯೇ ರೈಲು ಚಾಲಕ ನಿದ್ರೆಗೆ ಜಾರಿದ್ದಾನೆ. ಮೂರು ಗಂಟೆಗಳ ಕಾಲ ಹಳಿ ಮೇಲಿಂದ ರೈಲು ಕದಲಲಿಲ್ಲ. ಬೇರೆ ದಾರಿಯಿಲ್ಲದೆ ಪ್ರಯಾಣಿಕರು ಅಲ್ಲಿಯೇ ಕಾಲಕಳೆಯಬೇಕಾಯಿತು. ಈ ಘಟನೆ ಬಗ್ಗೆ ಮಾತನಾಡಿದ ಷಜಹಾನ್‌ಪೂರ್ ರೈಲ್ವೆ ಅಧಿಕಾರಿ ಅಮರೇಂದ್ರ ಗೌತಮ್ ಡ್ರೈವರ್‌ಗಳಿಗೆ ಮುಂದೆ ಸಿಗುವ ರೋಜಾ ಜಂಕ್ಷನ್‌ನಲ್ಲಿ ವಿಶ್ರಾಂತಿಗೆ ಅವಕಾಶವಿದೆ. ಆದರೆ ಚಾಲಕನ ಅತೀ ನಿದ್ರೆಯಿಂದಾಗಿ ಈ ರೀತಿ ಆಗಿದೆ. ಮುಂದೆ ನಡೆಯುವ ಅನಾಹುತ ತಪ್ಪಿದೆ. ಒಂದು ವೇಳೆ ಪ್ರಯಾಣದ ಮಧ್ಯೆಯಲ್ಲಿ ನಿದ್ರೆ ಮಾಡಿದ್ರು ಖಂಡಿತ ಅನಾಹುತ ನಡೆಯುತ್ತಿತ್ತು ಎಂದು ಸಮರ್ಥನೆ ನೀಡಿದ್ದಾರೆ. ಚಾಲಕನ ನಿದ್ರೆ ಮುಗಿದ ನಂತರ ರೈಲನ್ನು ನಡೆಸಲಾಯಿತು ಎಂದಿದ್ದಾರೆ.