International

ಇಂಗ್ಲೆಂಡ್‌ನಲ್ಲಿ ಹೊಸ ಒಮಿಕ್ರಾನ್‌ ತಳಿ; ವೇಗವಾಗಿ ಹರಡುತ್ತಿದ್ದ XE ತಳಿ

ಇಂಗ್ಲೆಂಡ್‌ನಲ್ಲಿ ಒಮಿಕ್ರಾನ್‌ ಹೊಸ ತಳಿ ಭೀತಿ ಉಂಟು ಮಾಡುತ್ತಿದ್ದ. ಒಮಿಕ್ರಾನ್‌ ರೂಪಾಂತರಿ XE ಎಂದು ಕರೆಯಲ್ಪಡುವ ತಳಿ ಅತ್ಯಂತ ವೇಗವಾಗಿ ಹರಡುತ್ತಿದೆ. ಈ ಹಿಂದಿಯ ಯಾವುದೇ ಕೊವಿಡ್‌ ತಳಿ ಹರಡದಷ್ಟು ಈ ತಳಿ ಹರಡುತ್ತಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ್ದು, ಕೊವಿಡ್‌ ಬಗ್ಗೆ ನಿರ್ಲಕ್ಷ್ಯ ಬೇಡ ಎಂದಿದೆ.

ಹೊಸ ತಳಿಗೆ XE ಎಂದು ಹೆಸರಿಡಲಾಗಿದೆ. ಜನವರಿಯಲ್ಲಿ ಇಂಗ್ಲೆಂಡ್‌ನಲ್ಲಿ ಈ ಹೊಸ ತಳಿ ಮೊದಲು ಪತ್ತೆಯಾಯಿತು. ಈ ಹಿಂದಿನ ತಳಿಗಳಿಗಿಂತ ಇದು ಹತ್ತು ಪಟ್ಟು ವೇಗವಾಗಿ ಹರಡುತ್ತದೆ ಎಂದು ಹೇಳಲಾಗುತ್ತಿದೆ. SARS-CoV-2 ಜೊತೆಗೆ ಇತರೆ ರೂಪಾಂತರಗಳಿಗೆ ಸಂಬಂಧಿಸಿದ ಸಾರ್ವಜನಿಕ ಆರೋಗ್ಯದ ಅಪಾಯಕ್ಕೆ ಸಂಬಂಧಿಸಿದಂತೆ ನಿಗಾವಹಿಸುವುದು, ವಿಶ್ಲೇಷಣೆಗೆ ಒಳಪಡಿಸುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಮುಂದುವರೆಸಿದೆ.

ಬುಧವಾರ ಬಿಡುಗಡೆಯಾದ ಕೋವಿಡ್-19 ಸಾಂಕ್ರಾಮಿಕ ಪ್ರಕರಣಗಳ ಮಾಹಿತಿ ಪ್ರಕಾರ, ಕಳೆದ ವಾರ ಕೋವಿಡ್-19ನಿಂದಾದ ಸಾವುಗಳು ಶೇ 43ರಷ್ಟು ಹೆಚ್ಚಾಗಿದೆ. ಇದು ಭಾರತದಿಂದ ವರದಿಯಾದ ಹಿಂದಿನ ಮಾಹಿತಿಗಳು ಸೇರಿದಂತೆ ಇತರೆ ಅಂಶಗಳಿಂದ ಪ್ರೇರಿತವಾಗಿದೆ. 2022ರ ಜನವರಿ ಅಂತ್ಯ ಮತ್ತು ಮಾರ್ಚ್ ನಡುವೆ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಅದಾದ ನಂತರ ಸತತ ಎರಡು ವಾರಗಳ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಮಾರ್ಚ್ 21 ರಿಂದ 27 ರ ವಾರದಲ್ಲಿ ಹಿಂದಿನ ವಾರಕ್ಕೆ ಹೋಲಿಸಿದರೆ ಶೇ 14 ರಷ್ಟು ಇಳಿಕೆಯೊಂದಿಗೆ ಹೊಸ ಪ್ರಕರಣಗಳ ಸಂಖ್ಯೆ ಮತ್ತೆ ಕಡಿಮೆಯಾಗಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ.

Share Post