ತಾಜ್‌ಮಹಲ್‌ಗೆ ಭೇಟಿ ನೀಡಿದ್ದ ಇಂಡೇನೇಷ್ಯಾ ಅಧ್ಯಕ್ಷರ ಮಗ
ದೆಹಲಿ; ದೆಹಲಿಯಲ್ಲಿ ಜಿ20 ಶೃಂಗಸಭೆಗೆ ಪ್ರಪಂಚದ ಹಲವು ಗಣ್ಯರು ಆಗಮಿಸಿದ್ದಾರೆ. ಅವರ ಜೊತೆಗೆ ಕುಟುಂಬದ ಸದಸ್ಯರು ಕೂಡಾ ಆಗಮಿಸಿದ್ದಾರೆ. ಅವರು ದೇಶದ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.
ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಜತೆಗೆ ಅವರ ಕುಟುಂಬದ ಸದಸ್ಯರು ಕೂಡಾ ಆಗಮಿಸಿದ್ದಾರೆ. ಜೋಕೊ ವಿಡೋಡೊ ಮಗ ಮತ್ತು ಸೊಸೆ ಆಗ್ರಾದ ತಾಜ್ ಮಹಲ್ಗೆ ಭೇಟಿ ಕೊಟ್ಟಿದ್ದರು.
ತಾಜ್ ಮಹಲ್ ಮುಂದೆ ಅವರು ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಜೋಕೊ ವಿಡೋಡೊ ಅವರ ಮಗ ಕೇಸಾಂಗ್ ಪಂಗರೆಪ್ ಮತ್ತು ಸೊಸೆ ಎರಿನಾ ಗುಡೋನೊ ತಾಜ್ ಮಹಲ್ ಸ್ಮಾರಕದ ಮುಂದೆ ಒಂದಿಷ್ಟು ಸಮಯ ಕಳೆದಿದ್ದಾರೆ. ಅದರ ವಿಡಿಯೋಗಳೂ ಹರಿದಾಡುತ್ತಿವೆ.