National

ಭಯೋತ್ಪಾದನೆ ಬಗ್ಗೆ ಗಂಭೀರ ಚಿಂತನೆ ಅಗತ್ಯ; ಮೋದಿ

ನವದೆಹಲಿ; ಭಯೋತ್ಪಾದನೆ ಹಾಗೂ ಸೈಬರ್ ದಾಳಿ ವಿಚಾರಗಳ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಿ-೨೦ ಸಮ್ಮೇಳನದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಅವರು ಮಾತನಾಡಿದರು. ಸಬ್ ಕಾ ಸಾತ್, ಸಬ್ ಕಾ ವಿಕಾಸ್​ಗೆ ಮಂತ್ರವನ್ನು ಪಠಿಸಬೇಕು. ಭಾರತದ ಅಧ್ಯಕ್ಷತೆ ದೇಶದ ಒಳಗೆ ಮತ್ತು ಹೊರಗೆ ಇದು ಜನರ G20 ಸಭೆಯಾಗಿದೆ. ದೇಶದ 60 ನಗರದಲ್ಲಿ 200 ಅಧಿಕ ಸಭೆಗಳು ನಡೆದಿವೆ ಎಂದರು.

ಶೃಂಗಸಭೆಯ ಮೊದಲ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ 20 ನ ಖಾಯಂ ಸದಸ್ಯರಾಗಿ ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಆಫ್ರಿಕನ್ ಯೂನಿಯನ್ ಮುಖ್ಯಸ್ಥರನ್ನು ಆಹ್ವಾನಿಸಿದ್ದರು.

Share Post