NationalPolitics

ಹರಿಯಾಣದಲ್ಲಿ ಬಿಜೆಪಿ ರಣತಂತ್ರ; ರಾಜ್ಯಸಭಾ ಅಖಾಡಕ್ಕೆ ಕಾರ್ತಿಕೇಯ ಶರ್ಮಾ

ನವದೆಹಲಿ; ಐಟಿವಿ ನೆಟ್‌ವರ್ಕ್‌ ಸಂಸ್ಥಾಪಕರಾದ ಕಾರ್ತಿಕೇಯ ಶರ್ಮಾ ಅವರು ಬಿಜೆಪಿ ಬೆಂಬಲದೊಂದಿಗೆ ಹರಿಯಾಣದಲ್ಲಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ಎರಡನೇ ಸ್ಥಾನಕ್ಕಾಗಿ ಅವರು ಅಖಾಡಕ್ಕಿಳಿದಿದ್ದು, ಹರಿಯಾಣ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.

ಹರಿಯಾಣದಲ್ಲಿ ಎರಡು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದ್ರಲ್ಲಿ ಮೊದಲನೇ ಅಭ್ಯರ್ಥಿಯಾಗಿ ಬಿಜೆಪಿ ಪಕ್ಷ ಕೃಷ್ಣಲಾಲ್‌ ಪನ್ವಾರ್‌ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಅಜಯ್‌ ಮಾಕೇನ್‌ರನ್ನು ಅಖಾಡಕ್ಕಿಳಿಸಿದೆ. ಆದ್ರೆ ಇದೀಗ ಬಿಜೆಪಿ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಕಾರ್ತಿಕೇಯ ಶರ್ಮಾ ಅವರು ಕಣಕ್ಕಿಳಿದಿದ್ದಾರೆ. ಹೀಗಾಗಿ ಹರಿಯಾಣ ರಾಜ್ಯಸಭಾ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಹರಿಯಾಣದಲ್ಲಿ ಬಿಜೆಪಿ 40 ಶಾಸಕರನ್ನು ಹೊಂದಿದೆ. ಕಾಂಗ್ರೆಸ್‌ನ 31 ಶಾಸಕರು, ಜನನಾಯಕ್‌ ಜನತಾ ಪಾರ್ಟಿಯ ಹತ್ತು, ಇಂಡಿಯನ್‌ ನ್ಯಾಷನಲ್‌ ಲೋಕ್‌ ದಳದ ಒಬ್ಬರು ಹಾಗೂ ಪಕ್ಷೇತರರು ಹತ್ತು ಶಾಸಕರಿದ್ದಾರೆ.

ಅತಿಹೆಚ್ಚು ಬಲ ಇರುವ ಬಿಜೆಪಿಗೆ ಜನನಾಯಕ್‌ ಜನತಾ ಪಾರ್ಟಿ ಬೆಂಬಲ ಇದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಕೃಷ್ಣಲಾಲ್‌ ಪನ್ವಾರ್‌ ಗೆಲ್ಲೋದು ಪಕ್ಕಾ ಆಗಿದೆ. ಇನ್ನು ಎರಡನೇ ಸ್ಥಾನವನ್ನೂ ಗೆಲ್ಲಿಸಿಕೊಳ್ಳುವುದಕ್ಕಾಗಿ ಬಿಜೆಪಿ ಪಕ್ಕಾ ಪ್ಲ್ಯಾನ್‌ ಮಾಡಿದ್ದು, ಆ ಸ್ಥಾನಕ್ಕಾಗಿ ಕಾರ್ತಿಕೇಯ ಶರ್ಮಾ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಲಾಗಿದೆ. ಕಾರ್ತಿಕೇಯ ಶರ್ಮಾ ಅವರಿಗೆ ಬಿಜೆಪಿ, ಜನನಾಯಕ್‌ ಜನತಾ ಪಾರ್ಟಿ ಹಾಗೂ ಪಕ್ಷೇತರರ ಬೆಂಬಲವಿದೆ ಎಂದು ತಿಳಿದುಬಂದಿದೆ.

 

Share Post