National

ಕೋವಿಡ್‌ – ದೇಶಾದ್ಯಂತ 24 ಗಂಟೆಯಲ್ಲಿ 1.16 ಲಕ್ಷ ಹೊಸ ಪ್ರಕರಣಗಳು

ನವದೆಹಲಿ : ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗ್ತಿದೆ. ಕಳೆದ ಮೂರು ದಿನಗಳಿಂದ ಗಮನಿಸಿದರೆ, ದಿನದಿಂದ ದಿನಕ್ಕೆ ಶೇ 30 ರಿಂದ 40% ಏರಿಕೆ ಆಗ್ತಿದೆ. ಶುಕ್ರವಾರ ದೇಶಾದ್ಯಂತ 1,16,838 ಹೊಸ ಪ್ರಕರಣಗಳು ದಾಖಲಾಗಿದೆ.

ಬುಧವಾರ ದೇಶದಲ್ಲಿ 58 ಸಾವಿರ ಪ್ರಕರಣಗಳು ದಾಖಲಾಗಿದ್ದವು. ಇನ್ನು ಗುರುವಾರ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿತ್ತು. ಶುಕ್ರವಾರ ತೀವ್ರ ಗತಿಯಲ್ಲಿ ಏರುತ್ತಿರುವ ಕೋವಿಡ್‌ ಸಂಖ್ಯೆ ನೋಡಿದರೆ ಮೂರನೇ ಅಲೆ ತಡೆಯುವುದು ಕಷ್ಟ ಸಾಧ್ಯ ಎನಿಸದೆ ಇರದು. ಇಂದು ಕೂಡ ಸಾಕಷ್ಟು ಕೇಸ್‌ಗಳು ದಾಖಲಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಮುಂಬೈ, ದೆಹಲಿ, ಬೆಂಗಳೂರು, ವೆಸ್ಟ್‌ ಬೆಂಗಾಲ್‌ ಕೊರೊನಾ ಹಾಟ್‌ ಸ್ಪಾಟ್‌ಗಳಾಗಿ ಮಾರ್ಪಡುತ್ತಿವೆ. ಮತ್ತೊಂದು ಕಡೆಯಿಂದ ಓಮಿಕ್ರಾನ್‌ ಕೂಡ ತನ್ನ ವೇಗ ಹೆಚ್ಚಿಸಿದೆ. ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಓಮಿಕ್ರಾನ್‌ ಕೇಸ್‌ಗಳು ದಾಖಲಾಗಿದೆ. ಸಮುದಾಯಕ್ಕೆ ಓಮಿಕ್ರಾನ್‌ ಕೂಡ ಹರಡಿದಂತೆ ಕಣ್ತಿದೆ.

ಓಮಿಕ್ರಾನ್‌ ಇಂದ ಓರ್ವ ಮಹಿಳೆ ಅಸುನೀಗಿದ್ದಾರೆ. ಓಮಿಕ್ರಾನ್‌ ವೇಗವಾಗಿ ಹರಡುತ್ತೆ ಆದರೆ ಅಷ್ಟು ಅಪಾಯಕಾರಿ ಅಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ WHO ಸಂಸ್ಥೆ ರಾಷ್ಟ್ರಗಳಿಗೆ ಓಮಿಕ್ರಾನ್ ನಿರ್ಲಕ್ಷಿಸದಂತೆ ಕಿವಿಮಾತು ಹೇಳಿದೆ.

Share Post