DistrictsLifestyle

ಪುರುಷ ಡ್ರೆಸ್‌ನಲ್ಲಿ ಬಂದಿದ್ದ ತೃತೀಯಲಿಂಗಿ; ಬಸ್‌ ಕಂಡಕ್ಟರ್‌ ಫುಲ್‌ ಕನ್ಫ್ಯೂಸ್‌

ಯಾದಗಿರಿ; ಶಕ್ತಿ ಯೋಜನೆಯಡಿ ತೃತೀಯ ಲಿಂಗಿಗಳಿಗೂ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದ್ರೆ, ಇದ್ರಿಂದ ಬಸ್‌ ಕಂಡಕ್ಟರ್‌ಗಳು ಕೆಲ ವೇಳೆ ಕನ್ಫ್ಯೂಸ್‌ ಆಗುತ್ತಿದ್ದಾರೆ. ಅದಕ್ಕೊಂದು ಉದಾಹರಣೆ ಯಾದಗಿರಿಯಲ್ಲಿ ನಡೆದಿರುವ ಘಟನೆ. ಲಕ್ಷ್ಮೀ ಎಂಬ ತೃತೀಯ ಲಿಂಗ ಪುರುಷರ ಡ್ರೆಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವೇಳೆ ಉಚಿತ ಟಿಕೆಟ್‌ ನೀಡಬೇಕೇ ಬೇಡವೇ ಎಂಬುದರ ಬಗ್ಗೆ ಕಂಡಕ್ಟರ್‌ ಕನ್ಫ್ಯೂಸ್‌ ಆಗಿದ್ದಾರೆ.

ರಾಯಚೂರಿನಿಂದ ಯಾದಗಿರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿ ಲಕ್ಷ್ಮೀ ಪ್ರಯಾಣ ಮಾಡಿದ್ದಾರೆ. ಈ ವೇಳೆ ನಾನು ತೃತೀಯ ಲಿಂಗಿ ಎಂದು ಆಧಾರ್‌ ಕಾರ್ಡ್‌ ತೋರಿಸಿದ್ದಾರೆ. ಆದ್ರೆ ಆಧಾರ್‌ ಕಾರ್ಡ್‌ನಲ್ಲಿ ಲಕ್ಷ್ಮೀ ಎಂಬ ಹೆಸರಿದೆಯಾದರೂ, ಲಿಂಗ ಜಾಗದಲ್ಲಿ ಪುರುಷ ಎಂದಿದೆ. ಇದ್ರಿಂದಾಗಿ ಪುರುಷ ಎಂದು ಪರಿಗಣಿಸಬೇಕೆ ಅಥವಾ ತೃತೀಯ ಲಿಂಗಿ ಎಂದು ಪರಿಗಣಿಸಬೇಕೆ ಎಂದು ಕಂಡಕ್ಟರ್‌ ಕನ್ಫ್ಯೂಸ್‌ ಆಗಿದ್ದಾರೆ.

ಕೊನೆಗೆ ತೃತೀಯ ಲಿಂಗಿ ಲಕ್ಷ್ಮೀಯೇ ಸಮಜಾಯಿಷಿ ಕೊಟ್ಟಿದ್ದಾರೆ. ನಾನು ತೃತೀಯ ಲಿಂಗಿ. ಆದ್ರೆ ನಾನು ಮಹಿಳೆಯರ ಬಟ್ಟೆ ಹಾಕಿಕೊಳ್ಳುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಅನಂತರ ಕಂಡಕ್ಟರ್‌ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

Share Post