National

ಬ್ಯಾಂಡೇಜ್‌ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ; ಸಿಕ್ಕಿಬಿದ್ದ ಆರೋಪಿ

ಹೈದರಾಬಾದ್‌: ಶಾರ್ಜಾದಿಂದ ಹೈದರಾಬಾದ್‌ಗೆ ಬಂದಿಳಿದ ವ್ಯಕ್ತಿಯೊಬ್ಬ ಅಕ್ರಮವಾಗಿ ಒಂದು ಕೆಜಿಯಷ್ಟು ಚಿನ್ನ ತಂದಿದ್ದ. ಕಾಲಿಗೆ ಬ್ಯಾಂಡೇಜ್‌ ಕಟ್ಟಿಕೊಂಡು ಅದ್ರಲ್ಲಿ ಚಿನ್ನ ಅಡಗಿಸಿಟ್ಟಿದ್ದ. ಹೈದರಾಬಾದ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ ಆತ ಸಿಕ್ಕಿಬಿದ್ದಿದ್ದಾನೆ. ಆತನಿಂದ ಸುಮಾರು 970 ಗ್ರಾಂ ಅಂದರೆ ಸುಮಾರು 47 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಸ್ಟಮ್ಸ್‌ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ವಿಚರಣೆ ನಡೆಸುತ್ತಿದ್ದಾರೆ.

Share Post