ನಾಲೆಗೆ ಬಿದ್ದ ಆನೆಗಳ ಹಿಂಡು; ಮೇಲೆ ಬರಲಾಗದೆ ಪರದಾಟ
ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ಬಳಿ ನಾಲ್ಕು ಆನೆಗಳು ನೀರು ಕುಡಿಯಲು ಬಂದಿದ್ದು, ವೇಳೆ ಜಾರಿ ನಾಲೆಗೆ ಬಿದ್ದಿವೆ. ಆದ್ರೆ ನಾಲೆಯಲ್ಲಿ ಸಿಮೆಂಟ್ ತಡೆಗೋಡೆಗಳು ಇದ್ದಿದ್ದರಿಂದ ಅವು ಮೇಲೆ ಬರಲಾರದೆ ಪರದಾಡಿದ ಘಟನೆ ನಡೆದಿದೆ.
ಇಲ್ಲಿನ ನೆಲ್ಲೂರು ಪಾಲ ಗ್ರಾಮದ ಬಳಿ ನಾಲೆ ಹಾದುಹೋಗಿದ್ದು, ಈ ನಾಲೆಯಲ್ಲಿ ನೀರು ಕುಡಿಯಲು ನಾಲ್ಕು ಆನೆಗಳ ಹಿಂಡು ಬಂದಿತ್ತು. ಈ ಆನೆಗಳು ಜಾರಿ ನಾಲೆಯೊಳಗೆ ಬಿದ್ದಿವೆ. ಆದರೆ ತಡೆಗೋಡೆಗಳು ಇಳಿಜಾರಾಗಿ, ನೈಸಾಗಿವೆ. ಹೀಗಾಗಿ ಆನೆಗಳಿಗೆ ಮೇಲೆ ಬರಲು ಆಗುತ್ತಿಲ್ಲ. ಹತ್ತಲು ಹೋಗಿ ಮತ್ತೆ ಜಾರಿ ನಾಲೆಗೆ ಬೀಳುತ್ತಿವೆ. ಈ ದೃಶ್ಯಗಳನ್ನು ಸ್ಥಳೀಯರು ಸೆರೆ ಹಿಡಿದ್ದಾರೆ.
ಅರಣ್ಯ ಸಿಬ್ಬಂದಿಗೆ ಗ್ರಾಮಸ್ಥರು ವಿಷಯ ಮುಟ್ಟಿಸಿದ್ದಾರೆ. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ನಾಲೆಯಲ್ಲಿ ಸಿಲುಕಿರುವ ಆನೆಗಳನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದ್ದಾರೆ.