Crime

ಟಿಫಿನ್‌ ಬಾಕ್ಸ್‌ಗಳಲ್ಲಿ ಬಾಂಬ್‌; ನಕ್ಸಲರ ಸಂಚು ಬಯಲು

ಬಲರಾಂಪುರ: ಛತ್ತಿಸ್‌ಗಢದ ಬಲರಾಂಪುರದ ಚುಂಚುನಾ ಮತ್ತು ಪುಂಡಗ್ ಪ್ರದೇಶಗಳಲ್ಲಿ 7 ಐಇಡಿ ಟಿಫಿನ್ ಬಾಂಬ್‌ಗಳು ಪತ್ತೆಯಾಗಿವೆ. ಸಮ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಬಾಂಬ್‌ಗಳು ಪತ್ತೆಯಾಗಿದ್ದು, ಸಿಆರ್‌ಪಿಎಫ್‌ ಯೋಧರು ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ನಕ್ಸಲರು ಭುತಾಹಿ ಮಾಡ್ ರಸ್ತೆಯಲ್ಲಿ ಐಇಡಿ ಬಾಂಬ್‌ಗಳನ್ನು ಇಟ್ಟಿದ್ದಾರೆ ಎಂದು ಸಿಆರ್‌ಪಿಎಫ್‌ಗೆ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇಲೆ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ, ಮೊದಲು ಮೂರು ಟಿಫಿನ್‌ ಬಾಕ್ಸ್‌ಗಳು ಪತ್ತೆಯಾದವರು. ಅದರಲ್ಲಿ ಬಾಂಬ್‌ ಅಳವಡಿಸಿದ್ದು ಕಂಡುಬಂತು. ಮತ್ತೊಂದು ಕಡೆ ಕಡೆ ಹುಡುಕಿದಾಗ ನಾಲ್ಕು ಬಾಂಬ್‌ಗಳು ಸಿಕ್ಕಿವೆ. ಏಳೂ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ನಕ್ಸಲರು ಏಕಕಾಲದಲ್ಲಿ ಏಳು ಬಾಂಬ್‌ಗಳನ್ನು ಸ್ಫೋಟಿಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

Share Post