CrimeNational

ಜಲಪಾತದಲ್ಲಿ ಇದ್ದಕ್ಕಿದ್ದಂತೆ ನೀರು ಹೆಚ್ಚಳ!; ಕೊಚ್ಚಿಹೋದ ತಾಯಿ, ನಾಲ್ವರು ಮಕ್ಕಳು!

ಲೋನವಾಲ; ಜಲಪಾತದಲ್ಲಿ ಇದ್ದಕ್ಕಿದ್ದಂತೆ ನೀರಿನ ಹರಿವು ಹೆಚ್ಚಾಗಿದ್ದು, ಮಹಿಳೆ ಹಾಗೂ ನಾಲ್ವರು ಮಕ್ಕಳು ನೀರಿನಲ್ಲಿ ಕೊಚ್ಚಿಹೋಗಿರುವ ದಾರುಣ ಘಟನೆ ನಡೆದಿದೆ.. ಮಹಾರಾಷ್ಟ್ರದ ಲೋನಾವಾಲದಲ್ಲಿ ಈ ದುರ್ಘಟನೆ ನಡೆದಿದ್ದು, ಮಹಿಳೆ ಹಾಗೂ ಇಬ್ಬರು ಮಕ್ಕಳ ಮೃತದೇಹಗಳು ಸಿಕ್ಕಿವೆ.. ಆದ್ರೆ ಇನ್ನುಳಿದ ಇಬ್ಬರು ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.. 

ನಿನ್ನೆ ಭಾನುವಾರವಾದ್ದರಿಂದ ಕುಟುಂಬದ ಜೊತೆ ನೀರಿನಲ್ಲಿ ಕಳೆಯಲು ಬಂದಿದ್ದಾಗ ಈ ದುರ್ಘಟನೆ ನಡೆದಿದೆ.. ಲೋನವಾಲದ ಭುಶಿ ಡ್ಯಾಮ್ ಪಕ್ಕದ ಜಲಪಾತದ ಬಳಿ 36 ವರ್ಷದ ಮಹಿಳೆ ತನ್ನ ನಾಲ್ವರು ಮಕ್ಕಳೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದರು.. ಇದೇ ವೇಳೆ ಮಳೆ ನೀರು ಜಾಸ್ತಿಯಾಗಿ, ಎಲ್ಲರೂ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.. ಎಲ್ಲರೂ ನೋಡುತ್ತಿದ್ದರೂ ಕೂಡಾ, ಅವರನ್ನು ರಕ್ಷಣೆ ಮಾಡೋದಕ್ಕೆ ಆಗಿಲ್ಲ.. ಶರವೇಗದಲ್ಲಿ ಐದು ಮಂದಿಯೂ ಕೊಚ್ಚಿಹೋಗಿದ್ದಾರೆ.. ಕೊಂಚ ದೂರದಲ್ಲಿ ಮೂವರ ಮೃತದೇಹಗಳು ಸಿಕ್ಕಿವೆ..

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ವಿಪರೀತ ಮಳೆಯಾಗುತ್ತಿದೆ.. ಈ ಹಿನ್ನೆಲೆಯಲ್ಲಿ ಏಕಾಏಕಿ ನೀರು ಹರಿದಿದ್ದರಿಂದ ಈ ದುರ್ಘಟನೆ ನಡೆದಿದೆ.. ಐದೂ ಮಂದಿ ಕೊಚ್ಚಿ ಹೋಗುವ ದೃಶ್ಯಗಳು ಮೊಬೈಲ್‌ಗಳಲ್ಲಿ ಸೆರೆಯಾಗಿವೆ..

Share Post