Cinema

ನಾಳೆ ತೆರೆ ಕಾಣಲಿದೆ ‌ʼಬೈ ಟು ಲವ್ʼ

ಬೆಂಗಳೂರು : ಹರಿ ಸಂತು ನಿರ್ದೇಶನದಲ್ಲಿ ಮೂಡಿ ಬಂದಿರುವ ʼಬೈ ಟು ಲವ್‌ʼ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಧನ್ವೀರ್‌ ಮತ್ತು ಶ್ರೀಲೀಲಾ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರ ಒಂದು ನವಿರಾದ ಪ್ರೇಮ ಕಥೆಯನ್ನು ಹೊಂದಿದೆ.

ಸಿನಿಮಾದ ಟೀಸರ್‌, ಟ್ರೈಲರ್‌ ಮತ್ತು ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಠಿಸಿದೆ. ಪ್ರೀತಿಸಿ ಮದುವೆಯಾದ ಜೋಡಿಯು ಸಂಸಾರವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದೇ ಸಿನಿಮಾದ ಒನ್‌ ಲೈನ್‌ ಸ್ಟೋರಿ ಆಗಿದೆ.

ಸಾಮಾನ್ಯ ಲವ್‌ ಸ್ಟೋರಿಗಿಂತ ಕೊಂಚ ಭಿನ್ನವೆನಿಸುವ ಸಿನಿಮಾ ಇದಾಗಿದೆ. ದಾವಣಗೆರೆಯ ಹುಡುಗ, ಮಂಗಳೂರಿನ ಹುಡುಗಿ ಮಧ್ಯೆ ಹುಟ್ಟುವ ಪ್ರೀತಿಯಿಂದ ಮದುವೆ ಆಗಲಿದೆ. ನಂತರದ ಜೀವನವನ್ನು ನಿರ್ದೇಶಕರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಧನ್ವೀರ್‌ ಹೇಳಿದರು.

ಕುಟುಂಬ ಸಮೇತರಾಗಿ ಯಾವುದೇ ಮುಜುಗರ ಇಲ್ಲದೆ ನೋಡಬಹುದಾದ ಸಿನಿಮಾ ಇದು. ಸಂಬಂಧಗಳನ್ನು ಬೇಸ್‌ ಮಾಡಿ ಸಿನಿಮಾ ಮಾಡಲಾಗಿದೆ. ಈ ಕಥೆ ನನ್ನ ತಾಯಿಗೂ ತುಂಬಾ ಇಷ್ಟವಾಗಿದೆ ಎಂದು ಕಿಸ್‌ ಖ್ಯಾತಿಯ ಶ್ರೀಲೀಲಾ ಹೇಳಿದ್ದಾರೆ.

ಕೆ.ವಿ.ಎನ್‌ ಸಿನಿಮಾದವರು ನಿರ್ಮಾಣ ಮಾಡಿರುವ ಈ ಸಿನಿಮಾ ನಾಳೆ ತೆರೆಗೆ ಬರಲಿದೆ.

Share Post