HIJAB CONTROVERSY; ಮುಂಬೈ ಕಾಲೇಜಿನಲ್ಲೂ ಹಿಜಾಬ್‌ಗೆ ನಿಷೇಧ
ಮುಂಬೈ: ಹಿಜಾಬ್ ವಿವಾದ ಮಹಾರಾಷ್ಟ್ರಕ್ಕೂ ಕಾಲಿಟ್ಟಿದೆ. ಮುಂಬೈನ ಖಾಸಗಿ ಕಾಲೇಜೊಂದು ಸ್ಕಾರ್ಪ್, ವೇಲ್ ಹಾಗೂ ಬುರ್ಖಾಗೆ ನಿಷೇಧ ಹೇರಿದಿದೆ. ಇಲ್ಲಿನ ಎಂಎಂಪಿ ಷಾ ಕಾಲೇಜು ಆಡಳಿತ ಮಂಡಳಿ ಈ ಆದೇಶ ಹೊರಡಿಸಿದೆ.
ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಲೀನಾ ರಾಜೆ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ಥಿಗಳು ಸಮವಸ್ತ್ರ ಮಾತ್ರ ಧರಿಸಿ ತರಗತಿಗಳಿಗೆ ಹಾಜರಾಗಬೇಕು. ಸ್ಕಾರ್ಫ್, ವೇಲ್ ಮತ್ತು ಬುರ್ಖಾ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ. ಹಿಜಾಬ್ ಮಾತ್ರವಲ್ಲದೇ, ಮುಸುಕನ್ನು ಕೂಡ ನಿಷೇಧಿಸಿದ್ದೇವೆ ಎಂದು ಹೇಳಿದ್ದಾರೆ.