International

ಪೆರುವಿನಲ್ಲಿ ಭೀಕರ ರಸ್ತೆ ಅಪಘಾತ: 20ಮಂದಿ ದುರ್ಮರಣ

ದಕ್ಷಿಣ ಅಮೆರಿಕಾ( south America): ಕಣಿವೆಗೆ ಬಸ್‌ ಉರುಳಿಬಿದ್ದು ಸುಮಾರು 20ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಪೆರುವಿನಲ್ಲಿ ನಡೆದಿದೆ. ಉತ್ತರ ಪೆರುವಿನ ಲಿಬರ್ಟಾಡ್ ಪ್ರದೇಶದಲ್ಲಿ ಕಣಿವೆಗೆ ಬಸ್‌ ಉರುಳಿಬಿದ್ದಿದೆ. ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೆರುವಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ತಯಾಬಾಂಬಾದಿಂದ ಟ್ರುಜಿಲ್ಲೊಗೆ ತೆರಳುತ್ತಿದ್ದ ಬಸ್ ಸುಮಾರು 100 ಮೀಟರ್ ಆಳದ ಕಣಿವೆಗೆ ಉರುಳಿಬಿದ್ದಿದೆ. ಬಸ್‌ನಲ್ಲಿದ್ದ  ನಾಲ್ಕು ವರ್ಷದ ಮಗು ಸೇರಿದಂತೆ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿ ರಸ್ತೆಗಳ ಕಾರಣದಿಂದ ಈ ದುರಂತ ನಡೆದಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಕಳಪೆ ಮಟ್ಟದ ರಸ್ತೆಗಳಿಂದಾಗಿ ಅನೇಕ ಅಪಘಾತಗಳು ನಡೆಯುತ್ತಿವೆ. ಎನ್ನಲಾಗಿದೆ.

Share Post