EconomyNational

ಹೆದ್ದಾರಿಗಳಲ್ಲಿ ಇನ್ಮುಂದೆ ಟೋಲ್‌ ಪ್ಲಾಜಾಗಳೇ ಇರೋದಿಲ್ಲ; ಹಾಗಂತ….!

ಬೆಂಗಳೂರು; ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇಗಳಲ್ಲಿ ಟೋಲ್‌ ಸಂಗ್ರಹ ಮಾಡಲಾಗುತ್ತದೆ.. ಇದಕ್ಕಾಗಿ ಅಲ್ಲಲ್ಲಿ ಟೋಲ್‌ ಗೇಟ್‌ಗಳನ್ನು ನಿರ್ಮಿಸಿ, ಅಲ್ಲಿ ಟೋಲ್‌ ವಸೂಲಿ ಮಾಡಲಾಗುತ್ತದೆ.. ಆದ್ರೆ ಶೀಘ್ರದಲ್ಲೇ ದೇಶಾದ್ಯಂತ ಟೋಲ್‌ ಗೇಟ್‌ಗಳನ್ನು ತೆಗೆಯಲು ಚಿಂತನೆ ನಡೆಸಲಾಗುತ್ತಿದೆ.. ಹಾಗಂತ, ವಾಹನಗಳ ಮಾಲೀಕರು ಟೋಲ್‌ ಕಟ್ಟುವಂತಿಲ್ಲ ಅಂತ ಖುಷಿ ಪಡೋ ಅವಶ್ಯಕತೆ ಇಲ್ಲ.. ಯಾಕಂದ್ರೆ ಟೋಲ್‌ ಗೇಟ್‌ಗಳ ಬದಲಾಗಿ, ಉಪಗ್ರಹ ಆಧಾರಿತವಾಗಿ ಟೋಲ್‌ ಮಾಡೋ ತಂತ್ರಜ್ಞಾನ ಜಾರಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.. ಶೀಘ್ರದಲ್ಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ವೃದ್ದೆಯ ದೇಹವನ್ನು ತುಂಡು ತುಂಡು ಮಾಡಿ ನದಿಗೆ ಎಸೆದ ದುರುಳರು!

ಮೊದಲಿಗೆ ಟೋಲ್‌ನಲ್ಲಿ ನಗದು ಮೂಲಕ ಟೋಲ್‌ ಟ್ಯಾಕ್ಸ್‌ ವಸೂಲಿ ಮಾಡಲಾಗುತ್ತಿತ್ತು.. ಹೀಗಾಗಿ, ಚಿಲ್ಲರೆ ಮತ್ತಿತರ ಸಮಸ್ಯೆಯಿಂದ ಹೆಚ್ಚು ಹೊತ್ತು ವಾಹನಗಳು ಟೋಲ್‌ ಬಳಿ ಕ್ಯೂಗಟ್ಟಿ ನಿಲ್ಲಬೇಕಾಗಿತ್ತು.. ಅನಂತರ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಸಿ ಟೋಲ್‌ ಕಟ್ಟುವ ವ್ಯವಸ್ಥೆ ಮಾಡಲಾಯಿತು.. ಅದ್ರಲ್ಲೂ ಒಂದಷ್ಟು ಸಮಸ್ಯೆಗಳು ಎದುರಾದವು.. ಈಗ ಫಾಸ್ಟ್‌ಟ್ಯಾಗ್‌ ಮೂಲ ಟೋಲ್‌ ವಸೂಲಿ ಮಾಡಲಾಗುತ್ತಿದೆ.. ಮೊದಲು ಒಂದು ವಾಹನ ಟೋಲ್‌ ಗೇಟ್‌ ದಾಟಲು ಸರಾಸರಿ ಎಂಟು ನಿಮಿಷ ಬೇಕಾಗಿತ್ತು. ಆದ್ರೆ ಫಾಸ್ಟ್‌ ಟ್ಯಾಗ್‌ ಬಂದ ಮೇಲೆ ಕೇವಲ 47 ಸೆಕೆಂಡ್‌ಗಳಲ್ಲಿ ವಾಹನ ಟೋಲ್‌ ಗೇಟ್‌ ದಾಟುತ್ತಿದೆ.. ಹೀಗಿದ್ದರೂ, ಇಷ್ಟು ಸಮಯ ಕೂಡಾ ವೇಸ್ಟ್‌ ಮಾಡೋದು ಬೇಡ, ವಾಹನ ರಸ್ತೆಗಿಳಿಯುತ್ತಿದ್ದಂತೆ ಸ್ಯಾಟಲೈಟ್‌ ತಂತ್ರಜ್ಞಾನದ ಮೂಲಕ ಟೋಲ್‌ ದರ ಕಟ್‌ ಆಗುವ ವ್ಯವಸ್ಥೆ ಜಾರಿಗೆ ತರೋ ಪ್ರಯತ್ನ ನಡೆದಿದೆ.

ಇದನ್ನೂ ಓದಿ; ಬೈಕ್‌ಗೆ ಗುದ್ದಿದ ಕಸದ ಲಾರಿ; ಹುಡುಗ-ಹುಡುಗಿ ದೇಹಗಳನ್ನು 10 ಮೀಟರ್‌ ಎಳೆದೊಯ್ದ ವಾಹನ!

ಈ ಹೊಸ ವ್ಯವಸ್ಥೆಯನ್ನು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಎನ್ನುತ್ತಾರೆ. ಇದನ್ನು ಎಲ್ಲಾ ಕಡೆ ಜಾರಿ ಮಾಡುತ್ತೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಹಿರಂಗಪಡಿಸಿದ್ದಾರೆ. ರಾಜ್ಯಸಭಾ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.. ಪ್ರಸ್ತುತ, ಈ ಹೊಸ ಟೋಲ್ ವ್ಯವಸ್ಥೆಯನ್ನು ಕರ್ನಾಟಕದ ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ-275 ಮತ್ತು ಹರಿಯಾಣದ ಪಾಣಿಪತ್-ಹಿಸ್ಸಾರ್ ನಡುವಿನ ರಾಷ್ಟ್ರೀಯ ಹೆದ್ದಾರಿ 709ರಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ ಸಂಪೂರ್ಣ ಟೋಲ್ ವ್ಯವಸ್ಥೆಯಲ್ಲಿ ಭಾಗವಹಿಸುವ ಎಲ್ಲರಿಗೂ ಇತ್ತೀಚಿನ ತಂತ್ರಜ್ಞಾನವನ್ನು ವಿವರಿಸಲು ಜೂನ್ 25 ರಂದು ಕಾರ್ಯಾಗಾರವನ್ನು ಸಹ ಆಯೋಜಿಸಲಾಗಿತ್ತು ಎಂದು ಗಡ್ಕರಿ ಹೇಳಿದರು.

ಇದನ್ನೂ ಓದಿ; ಕೇಂದ್ರ ಸಚಿವ ಕುಮಾರಸ್ವಾಮಿ ಮುಗಿನಿಂದ ರಕ್ತಸ್ರಾವ; ಕಾರಣ ಏನು?

Share Post