National

ರಸ್ತೆ ಮೇಲೆ ನೋಟುಗಳ ಸುರಿಮಳೆ: ವಿಡಿಯೋ ವೈರಲ್‌

ಮಧ್ಯಪ್ರದೇಶ: ಅಂದು ರೈಲ್ವೆ ನಿಲ್ದಾಣದಿಂದ ಆಚೆ ಬಂದವರಿಗೆ ಆಶ್ಚರ್ಯ ಕಾದಿತ್ತು ರಸ್ತೆಯಲ್ಲೆಲ್ಲಾ ಹಣ ಚಲ್ಲಾಪಿಲ್ಲಿಯಾಗಿ ಬಿದ್ದಿದೆ. ಒಬ್ಬ ತಾತ ಇಷ್ಟಬಂದಂತೆ ಹಣವನ್ನು ರಸ್ತೆ ಮೇಲೆ ಎಸೆಯುತ್ತಿರುವ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೃಲ್‌ ಆಗಿದೆ. ಇದನ್ನು ನೋಡಿದ ಜನ ಕಾರಣ ತಿಳಿಯದೆ ಆಶ್ಚರ್ಯಕ್ಕೆ ಗುರಿಯಾದ್ರು. ಯಾರೊ ಅಲ್ಲಿದ್ದ ಒಬ್ಬ ವಿಡಿಯೋ ಮಾಡಿ ತನ್ನ ಟ್ವಿಟ್ಟರ್‌ ಖಾತೆಯಲ್ಲಿನ ಪೋಸ್ಟ್‌ ಮಾಡಿಕೊಂಡಿದ್ದಾನೆ.

ಈ ಘಟನೆ ನಡೆದಿದ್ದು ಮಧ್ಯಪ್ರದೇಶದ ಉಜ್ಜೈನಿ ನಗರದ ನಾಗದಾ ರೈಲ್ವೆ ನಿಲ್ದಾಣದ ಬಳಿ. ರೈಲ್ವೆ ನಿಲ್ದಾಣದ ಆಚೆ ಕುಳಿತು ಓರ್ವ ವೃದ್ಧ ತನ್ನ ಬಟ್ಟೆ ಗಂಟಿನಲ್ಲಿದ್ದ ಹಣವನ್ನು ಹೀಗೆ ಸುಮ್ಮನೆ ಬಿಸಾಡುತ್ತಿದ್ದಾನೆ ಅದರ ಜೊತೆಗೆ ಕೆಲವೊಂದು ಕಾಗದ ಪತ್ರಗಳೂ ಕೂಡ ರಸ್ತೆಯಲ್ಲಿ ಬಿದ್ದಿವೆ. ಹೀಗೆ ಮಾಡಬೇಡಿ ತಾತ ಅಂತ ಅಲ್ಲಿದ್ದವರು ಹೇಳಿದ್ರೂ, ಯಾರ ಮಾತಿಗೂ ಕಿವಿಗೊಡದೆ ತನ್ನಷ್ಟಕ್ಕೆ ತಾನು 100, 50, 20, 10ರೂಪಾಯಿ ನೋಟುಗಳನ್ನು ಎಸೆಯುತ್ತಿದ್ದಾರೆ. ಈ ವಿಚಾರವನ್ನು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಹಣವನ್ನು ವೃದ್ದನಿಗೆ ನೀಡಿ ಅಲ್ಲಿಗೆ ಬೇರೆ ಸ್ಥಳಕ್ಕೆ ಕರೆದೊಯ್ದಿದ್ದರು.

Share Post