India Covid Updates : 24ಗಂಟೆಯಲ್ಲಿ 1.79 ಲಕ್ಷ ಹೊಸ ಪ್ರಕರಣ ದಾಖಲು
ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,79,723 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 146 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದೆ.
ಭಾನುವಾರ ಮುಂಜಾನೆ 8ರಿಂದ ಸೋಮವಾರ ಬೆಳಗ್ಗೆ 8ರವರೆಗೆ ಇಷ್ಟು ಕೇಸ್‌ಗಳು ಬಂದಿರುವ ಕಾರಣ ಪಾಸಿಟಿವಿಟಿ ರೇಟ್ ನಿನ್ನೆಗಿಂತ 12.5ರಷ್ಟು ಹೆಚ್ಚಳವಾಗಿದೆ. ಈಗ ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7,23,619 ಕ್ಕೆ ಏರಿದೆ. ಇನ್ನು ಒಟ್ಟಾರೆ ಪಾಸಿಟಿವಿಟಿ ದರ ಶೇ. 13. 29ಕ್ಕೆ ಏರಿದೆ.
ಓಮಿಕ್ರಾನ್ ಕೂಡ ಜಾಸ್ತಿ ಆಗುತ್ತಿದ್ದು, ಸದ್ಯಕ್ಕೆ 4063 ಕ್ಕೆ ಏರಿಕೆ ಆಗಿದೆ.
ಮಹಾರಾಷ್ಟ್ರದಲ್ಲಿ ಗರಿಷ್ಠ ಕೇಸ್‌ಗಳು ದಾಖಲಾಗುತ್ತಿದ್ದರು ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿದೆ. ಇನ್ನು ಇಂದಿನಿಂದ ಎಲ್ಲೆಡೆ ಹಿರಿಯ ನಾಗರೀಕರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಆದ್ಯತೆ ಮೇಲೆ ಕೋವಿಡ್ ಮುನ್ನೆಚರಿಕೆಯ ಡೋಸ್ ನೀಡಲಾಗ್ತಿದೆ.
COVID19 | India reports 1,79,723 fresh cases & 146 deaths in the last 24 hours
Active case tally reaches 7,23,619. Daily Positivity rate at 13.29%
Omicron case tally at 4,033 pic.twitter.com/bOTWBFwuxN
— ANI (@ANI) January 10, 2022