InternationalNational

ಗಡ್ಡ, ಕೂದಲಿಗೆ ಕತ್ತರಿ ಹಾಕಿ ಟ್ರಿಮ್‌ ಆದ ರಾಹುಲ್‌; ಈಗ ಹೇಗೆ ಕಾಣಿಸ್ತಾರೆ ನೋಡಿ

ನವದೆಹಲಿ; ಭಾರತ್‌ ಜೋಡಿ ಯಾತ್ರೆ ಮಾಡಿದ್ದ ರಾಜುಲ್‌ ಗಾಂಧಿ ತಲೆ ಕೂದಲು ಹಾಗೂ ಗಡ್ಡವನ್ನು ಹಾಗೆಯೇ ಬಿಟ್ಟಿದ್ದರು. ಆದ್ರೆ ಇದೀಗ ಅವರು ಎಂದಿನ ಶೈಲಿಗೆ ಮರಳಿದ್ದಾರೆ. ಗಡ್ಡ ಹಾಗೂ ತಲೆ ಕೂದಲಿಗೆ ಕತ್ತರಿ ಹಾಕಿದ್ದಾರೆ. ಇದೀಗ ರಾಹುಲ್‌ ಗಾಂಧಿ ಟ್ರಿಮ್‌ ಮಾಡಿಸಿಕೊಂಡು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ರಾಹುಲ್‌ ಗಾಂಧಿಯವರು ಲಂಡನ್‌ಗೆ ತೆರಳಿದ್ದಾರೆ. ಈ ಕಾರಣಕ್ಕಾಗಿಯೇ ಅವರು, ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿಸಿಟಿಂಗ್ ಫೆಲೋ ಭಾಗಿಯಾಗಿದ್ದು ‘Learning to listen in the 21st century’ ಕುರಿತು ಉಪನ್ಯಾಸ ನೀಡಿದ್ದಾರೆ.

Share Post