National

2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ; ಮೋದಿ

ನವದೆಹಲಿ; ಭಾರತ ಪ್ರಜಾಪ್ರಭುತ್ವದ ತವರು ಮನೆ. ಭಾರತ ವಿವಿಧತೆಯಲ್ಲಿ ಏಕತೆಯಿಂದ ಕೂಡಿದ ಪ್ರಮುಖ ರಾಷ್ಟ್ರವಾಗಿದೆ ಎಂದು ಪ್ರಧಾನಿ‌ ನರೇಂದ್ರ ಮೋದಿ ಹೇಳಿದ್ದಾರೆ. ಕೆಂಪುಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಅವರು ಮಾತನಾಡಿದರು.

ನಾವು ಅಧಿಕಾರಕ್ಕೆ‌‌‌ ಬರುವ ಮೊದಲು ಭಯೋತ್ಪಾದಕರು ಪಟಾಕಿ ರೀತಿಯಲ್ಲಿ ದಾಳಿ ಮಾಡುತ್ತಿದ್ದರು. ಈಗ ನಾವು ದಾಳಿಗಳನ್ನು ಹತ್ತಿಕ್ಕಿದ್ದೇವೆ. ನಮ್ಮ ಮೂರೂ ಸೇನಾಪಡೆಗಳು ಈಗ ಬಲವಾಗಿವೆ. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಮೋದಿ ಹೇಳಿದರು.

ಮುಂದಿನ 50 ವರ್ಷ ಒಂದೇ ಮಂತ್ರದೊಂದಿಗೆ ಸಾಗುವುದು ಅಗತ್ಯವಿದೆ. ದೇಶದ ಎಲ್ಲ ಜನರು “ಭಾರತದ ಏಕತೆ” ಮಂತ್ರ ಜಪಿಸುತ್ತಾ ಹಜ್ಜೆ ಹಾಕಬೇಕಿದೆ. 2047 ರಲ್ಲಿ ಭಾರತದ ನಿರ್ಣಯಕ್ಕೆ ಜಗತ್ತು ತಲೆಬಾಗುತ್ತದೆ ಎಂದು ಪ್ರಧಾನಿ ಮೋದಿಯವರು ಹೇಳಿದರು.

 

Share Post